Lockdown ಅವಧಿಯಲ್ಲಿ ವೈರಲ್ ಗೊಂಡ Rakul Preet Singh ವಿಡಿಯೋ

ಕರೋನಾ ವೈರಸ್ ಪ್ರಸಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ನಟಿಮಣಿಯರೂ ಕೂಡ ಮನೆಯಿಂದ ಹೊರಬರುವುದನ್ನು ತಪ್ಪಿಸುತ್ತಿದ್ದಾರೆ ಮತ್ತು ತಮ್ಮ ಅಭಿಮಾನಿಗಳಿಗಾಗಿ ಮನೆಯಿಂದಲೇ ವೀಡಿಯೊಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

Last Updated : Apr 12, 2020, 08:14 PM IST
Lockdown ಅವಧಿಯಲ್ಲಿ ವೈರಲ್ ಗೊಂಡ Rakul Preet Singh ವಿಡಿಯೋ title=

ಕರೋನಾ ವೈರಸ್ ಪ್ರಸಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ನಟಿಮಣಿಯರೂ ಕೂಡ ಮನೆಯಿಂದ ಹೊರಬರುವುದನ್ನು ತಪ್ಪಿಸುತ್ತಿದ್ದಾರೆ ಮತ್ತು ತಮ್ಮ ಅಭಿಮಾನಿಗಳಿಗಾಗಿ ಮನೆಯಿಂದಲೇ ವೀಡಿಯೊಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಕೆಲ ನಟ-ನಟಿಯರು-ಕ್ರೀಡಾಪಟುಗಳು ಮನೆಯಿಂದಲೇ ವ್ಯಾಯಾಮ ಮಾಡಲು ತಮ್ಮ ತಮ್ಮ ಅಭಿಮಾನಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ಸರದಿಯಲ್ಲಿ ಇದೀಗ ದಕ್ಷಿಣ ಚಿತ್ರರಂಗದ ಹಾಗೂ ಬಾಲಿವುಡ್ ಖ್ಯಾತ ತಾರೆ ರಕುಲ್ ಪ್ರೀತ್ ಸಿಂಗ್ ಕೂಡ ಶಾಮೀಲಾಗಿದ್ದಾರೆ. ಹೌದು, ಈ ಸಂದರ್ಭದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಕುಲ್, ತಮಾಷೆಯ ರೀತಿಯಲ್ಲಿ ವ್ಯಾಯಾಮ ಮಾಡುತ್ತಿದ್ದಾಳೆ.

ರಕುಲ್ ಪ್ರೀತ್ ತಮ್ಮ ಈ ವಿಡಿಯೋದಲ್ಲಿ ಚಿತ್ರರಂಗದ ಇತರೆ ವ್ಯಕ್ತಿಗಳನ್ನು ಕೂಡ ನಾಮಕರಣ ಮಾಡಿದ್ದು, ತಾವು ಮಾಡಿರುವ ವ್ಯಾಯಾಮವನ್ನು ಮಾಡಿ ತೋರಿಸಲು ಚಾಲೆಂಜ್ ಮಾಡಿದ್ದಾರೆ. ರಕುಲ್ ಅವರ ಈ ವ್ಯಾಯಾಮ ಸ್ವಲ್ಪ ಅಪಾಯಕಾರಿ ಮತ್ತು ವಿಭಿನ್ನವಾಗಿದೆ, ಏಕೆಂದರೆ ರಕುಲ್ ಪ್ರೀತ್ ತನ್ನ ಕ್ರಾಪ್ ಟಾಪ್ ಅನ್ನು ಪ್ಲ್ಯಾಂಕ್ ಪೋಶಿಶನ್ ನಲ್ಲಿ ಧರಿಸುತ್ತಾರೆ. ವಾಸ್ತವವಾಗಿ, ಈ ವ್ಯಾಯಾಮ ಒಂದು ಟಿ-ಶರ್ಟ್ ಚಾಲೆಂಜ್ ಆಗಿದೆ.

ರಕುಲ್ ಪ್ರೀತ್ ತಮ್ಮ ಪೋಸ್ಟ್ನಲ್ಲಿ ರಿಯಾ ಚಕ್ರವರ್ತಿ, ಆಕಾಂಕ್ಷಾ ರಂಜನ್ ಕಪೂರ್ ಅವರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ತಮ್ಮ ವ್ಯಾಯಾಮವನ್ನು ಪುನರಾವರ್ತಿಸಿ ತೋರಿಸಲು ಚಾಲೆಂಜ್ ಮಾಡಿದ್ದಾರೆ. ತಮ್ಮ ಈ ವೀಡಿಯೊವನ್ನು ಹಂಚಿಕೊಂಡಿರುವ ರಕುಲ್, "ಕ್ವಾರಂಟೀನ್ ಅವಧಿಯಲ್ಲಿ ಸಾಮಾನ್ಯವಾಗಿ ಟಿ-ಶರ್ಟ್ ಧರಿಸುವ ಪ್ರಕ್ತಿಯೆಯಿಂದ ಬೋರ್ ಆಗಿದ್ದೆ. ಹೀಗಾಗಿ ನಿಮ್ಮೆಲ್ಲರಿಗೂ ಈ ಮೂಲಕ ಟಾಸ್ಕ್ ವೊಂದನ್ನು ನೀಡುತ್ತಿದ್ದೇನೆ ಮತ್ತು ಇದು ಸೂಪರ್ ಎಲಿವೇಟೆಡ್ ಪ್ಲ್ಯಾಂಕ್ ಆಗಿದೆ" ಎಂದು ಬರೆದುಕೊಂಡಿದ್ದಾಳೆ. ಸದ್ಯ ರಕುಲ್ ಪ್ರೀತ್ ಸಿಂಗ್ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ರಕುಲ್ ಪ್ರೀತ್ ಸಿಂಗ್ ಬಾಲಿವುಡ್ ನಲ್ಲಿ ಹಲವು  ಚಿತ್ರಗಳಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್ ಅಭಿನಯದ 'ದೇ ದೇ ಪ್ಯಾರ್ ದೇ' ಚಿತ್ರದಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ ಮತ್ತು ಅವರ ನಟನೆಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ರಕುಲ್ ಪ್ರೀತ್ ಸಿಂಗ್ ಇಂಡಿಯನ್ 2 ಮತ್ತು ಅಟ್ಯಾಕ್ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯನ್ 2 ತಮಿಳು ಚಿತ್ರವಾಗಿದೆ. ಈ ಚಿತ್ರದಲ್ಲಿ  ರಕುಲ್, ಕಮಲ್ ಹಾಸನ್ ಹಾಗೂ ಕಾಜಲ್ ಅಗರ್ವಾಲ್ ಅವರ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

Trending News