ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಂಗಿ ಕೂಡ ಟಾಪ್ ಹೀರೋಯಿನ್... ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ... ಯಾರಾಕೆ..!

Anushka Sharma Sister: ಸಿನಿಮಾ ರಂಗದಲ್ಲಿ ಯಾರ ಅದೃಷ್ಟ ಯಾವಾಗ ಬದಲಾಗುತ್ತೆ ಅನ್ನೋದನ್ನ ಊಹಿಸಲು ಸಹ ಸಾಧ್ಯವಿಲ್ಲ. ಕೆಲವರು ವರ್ಷಗಟ್ಟಲೆ ಇಂಡಸ್ಟ್ರಿಯಲ್ಲಿ ಶ್ರಮಿಸಿದರೂ ಹೆಸರು ಮಾಡಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಎಲೆಮರಿ ಕಾಯಿಯಂತೆ ಇದ್ದು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡುತ್ತಾರೆ. 

Written by - Yashaswini V | Last Updated : Feb 21, 2025, 11:11 AM IST
  • ಕ್ರಿಕೆಟ್ ರನ್ ಮಿಷನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರು.
  • ಅವರ ಸಹೋದರಿ ಸಹ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಎಂಬುದು ಕೆಲವರಿಗಷ್ಟೇ ತಿಳಿಸಿದೆ.
  • ಆಕೆ ನಟಿಸಿದ ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯೂ ದೊರೆತಿದೆ.
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಂಗಿ ಕೂಡ ಟಾಪ್ ಹೀರೋಯಿನ್... ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ... ಯಾರಾಕೆ..!

Ruhani Sharma: ತಾವೂ ಬೆಳ್ಳಿ ಪರದೆಯಲ್ಲಿ ಮಿಂಚಬೇಕು. ದೊಡ್ಡದಾಗಿ ಹೆಸರು ಮಾಡಬೇಕು ಎಂಬ ಕನಸು ಬಹುತೇಕ ಜನರಿಗೆ ಇರುತ್ತದೆ. ಆದರೆ, ಎಲ್ಲರಿಗೂ ಅದೃಷ್ಟ ಕೈ ಹಿಡಿಯುವುದಿಲ್ಲ.  ಕ್ರಿಕೆಟ್ ರನ್ ಮಿಷನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರು. ಅವರ ಸಹೋದರಿ ಸಹ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಎಂಬುದು ಕೆಲವರಿಗಷ್ಟೇ ತಿಳಿಸಿದೆ. ಆಕೆ ನಟಿಸಿದ ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯೂ ದೊರೆತಿದೆ. ಆಕೆ ಯಾರು ಅಂತ ಯೋಚಿಸುತ್ತಿದ್ದೀರಾ... ಅವರು ಬೆರ್ಯಾರು ಅಲ್ಲ ನಟಿ ರುಹಾನಿ ಶರ್ಮಾ. 

Add Zee News as a Preferred Source

ಅನುಷ್ಕಾ ಶರ್ಮ ಸಹೋದರಿ ರೂಹಾನಿ ಶರ್ಮಾ 2018ರಲ್ಲಿ ಚಿಲಾಸೌ ಸಿನಿಮಾದ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡದಿದ್ದರೂ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 

ಇದನ್ನೂ ಓದಿ- ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಿಟ್ಟು ಬಾಡಿಗೆ ಮನೆಯಲ್ಲಿರುವುದೇಕೆ..! ಅದರ ತಿಂಗಳ ಬಾಡಿಗೆ ಕೇಳಿದ್ರೆ ಆಗ್ತೀರಾ ಶಾಕ್! 

ಅಕ್ಕಿನೆನಿಯ ಉತ್ತರಾಧಿಕಾರಿಯಾಗಿ ಸುಶಾಂತ್ ನಾಯಕನಟನಾಗಿ ನಟಿಸಿರುವ ಈ ಸಿನಿಮಾದ ಕಥೆ ಸಂಪೂರ್ಣವಾಗಿ ಒಂದೇ ದಿನದಲ್ಲಿ ನಡೆಯುವ ಕತೆಯಾಗಿದೆ. ಭಾವನೆಗಳು ಹಾಗೂ ಹಾಸ್ಯ ಎರಡನ್ನೂ ತುಂಬಾ ಅದ್ಭುತವಾಗಿ ಚಿತ್ರಿಸಲಾಗಿರುವ ಈ ಸಿನಿಮಾದಲ್ಲಿ ರುಹಾನಿ ಶರ್ಮಾ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೊತೆಗೆ ಕ್ಲಾಸ್ ಹೀರೋಯಿನ್ ಆಗಿ ಹೊರಹೊಮ್ಮಿದರು. 

ಚಿಲಾಸೌ ಚಿತ್ರದಲ್ಲಿ ಪರಿಚಿತರಾಗಿ ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿಯಲ್ಲಿ ಸವಾಲುಗಳನ್ನು ಎದುರಿಸಿ ಉತ್ತುಂಗಕ್ಕೇರಿರುವ ನಟಿ ರುಹಾನಿ ಶರ್ಮಾ ಡರ್ಟಿ ಹ್ಯಾರಿ, ಹಂಡ್ರೆಡ್ ಎಕರೆಸ್ ಬ್ಯೂಟಿ, ಮತ್ತು ಹಾರ್ ನಂತಹ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಕ್ಲಾಸ್ ಹೀರೋಯಿನ್ ಎನಿಸಿಕೊಂಡಿದ್ದಾರೆ. 

ಇದನ್ನೂ ಓದಿ- ಪ್ರಖ್ಯಾತ ನಿರ್ದೇಶಕರೊಂದಿಗೆ ಸಮಂತಾ ಎರಡನೇ ಮದುವೆ! ಪೋಟೋ ಸಮೇತ ಹೊರಬಿತ್ತು ಬಹುದೊಡ್ಡ ರಹಸ್ಯ!?

ಬಾಲಿವುಡ್ ಗಿಂತ ತೆಲುಗಿನಲ್ಲಿ ಹೆಚ್ಚು ಆಫರ್‌ಗಳನ್ನು ಹೊಂದಿರುವ ರುಹಾನಿ ಶರ್ಮ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಶರ್ಮಾರ ಸ್ವಂತ ತಂಗಿಯಲ್ಲ, ಅವರ ಸೋದರ ಸಂಬಂಧಿ. ಈ ವಿಚಾರವನ್ನು ಸ್ವತಃ ರುಹಾನಿ ಶರ್ಮಾ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News