)
Vishnuvardhan's burial: ಅಭಿಮಾನ್ ಸ್ಟುಡಿಯೋ... ವಿಷ್ಣು ಅಭಿಮಾನಿಗಳಿಗೆ ಭಾವನಾತ್ಮಕ ಜಾಗ.. ಕೆಲ ದಿನಗಳ ಹಿಂದೆ ವಿಷ್ಣು ಸಮಾಧಿಯನ್ನ ನೆಲಸಮ ಮಾಡಲಾಗಿತ್ತು.. ರಾತ್ರೋ ರಾತ್ರಿ JCBಗಳು ವಿಷ್ಣು ಸಮಾಧಿಯನ್ನ ಹೇಳ-ಹೆಸರಿಲ್ಲಂದತೆ ಮಾಡಿತ್ತು. ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ರು.. ಪ್ರತಿಭಟನೆಗಳು ನಡೆದಿದ್ವು.. ಅದಾದ ಮೇಲೆ ಪ್ರಕರಣ ತಣ್ಣಗಾಗಿ ಹೋಗಿತ್ತು.. ಆದ್ರೆ ಇಂದು ವಿಷ್ಣು ಸ್ಮಾರಕ ಕೆಡವಿದವರಿಗೆ ರಾಜ್ಯ ಸರ್ಕಾರ ದೊಡ್ಡ ಶಾಕ್ ನೀಡಿದೆ.
ಯೆಸ್... ಬೆಂಗಳೂರಿನ ಕೆಂಗೇರಿಯಿಂದ ಉತ್ತರಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಈಗ ಸರ್ಕಾರದ ಸ್ವತ್ತು ಆಗಿದೆ. ರಾಜ್ಯ ಸರ್ಕಾರವು ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ನೀಡಿದ್ದ ಎಲ್ಲ 20 ಎಕರೆ ಜಾಗವನ್ನು ಈಗ ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಜಾಗ ನೀಡಲು ನಟ ಬಾಲಕೃಷ್ಣ ಕುಟುಂಬ ನಿರಾಕರಿಸಿತ್ತು. ಆದ್ರೆ ಈಗ ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್ಗೆ ಈಗ ಅಭಿಮಾನ್ ಸ್ಟುಡಿಯೋ ಜಾಗದ ಮೇಲೆ ಯಾವುದೇ ಹಕ್ಕು, ಅಧಿಕಾರ ಇಲ್ಲ.
ನಟ ಬಾಲಕೃಷ್ಣ ಅವರು ರಾಜ್ಯ ಸರ್ಕಾರದಿಂದ 20 ಎಕರೆ ಭೂಮಿಯನ್ನು 20 ವರ್ಷಗಳಿಗೆ ಲೀಸ್ಗೆ ಪಡೆದಿದ್ದರು. ನಂತರ ಅದನ್ನು ಕಂದಾಯ ಇಲಾಖೆಯು ಸ್ಟುಡಿಯೋ ನಿರ್ಮಾಣಕ್ಕಾಗಿ ಬಾಲಕೃಷ್ಣ ಅವರಿಗೆ ನೀಡಿತ್ತು. ಆದರೇ, ನಿಗದಿತ ಕಾಲಮಿತಿಯಲ್ಲಿ ಆ ಜಾಗದಲ್ಲಿ ಸ್ಟುಡಿಯೋವನ್ನು ನಿರ್ಮಾಣ ಮಾಡಿಲ್ಲ. ಹೀಗಾಗಿ ನಿಯಮ ಉಲಂಘನೆಯ, ಷರತ್ತಿನ ಉಲಂಘನೆಯ ಕಾರಣದಿಂದ ಎಲ್ಲ 20 ಎಕರೆ ಜಾಗವನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಅಭಿಮಾನ್ ಸ್ಟುಡಿಯೋ ಜಾಗವನ್ನು ಅರಣ್ಯ ಭೂಮಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಎಲ್ಲ 20 ಎಕರೆ ಜಾಗವನ್ನು ಅರಣ್ಯ ಭೂಮಿ ಎಂದು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ.
ಇನ್ನು ಈ ಬಗ್ಗೆ ಮಾತನಾಡಿದ ವಿಷ್ಣು ಅಳಿಯ ಅನಿರುದ್ ಮುಟ್ಟುಗೋಲು ಬಗ್ಗೆ ಅಧಿಕೃತ ಘೋಷಣೆ ಬಂದಿರಲಿಲ್ಲ ಈಗ ಬಂದಿದೆ..ಕೇವಲ 10 ಗುಂಟೆ ಜಾಗ ಕೇಳ್ತಿವಿ.. ಸಿಎಂ ಭೇಟಿ ಆದಾಗ ಈ ಬಗ್ಗೆ ಸೂಚನೆ ಸಿಕ್ಕಿರಲಿಲ್ಲ ನಾನು ಏನು ಹೇಳ್ತಿದಿನೋ.. ಅದನ್ನ ಅಮ್ಮ ಹೇಳ್ತಿರೋದು ಸಿಎಂ ಕಳೆದ ಬಾರಿ ಹೋದಾಗಲೂ.. ಈ ಬಾರಿಯೂ ಕರ್ನಾಟಕ ರತ್ನ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎಂದ್ರು
ಒಟ್ಟಾರೆ ಬಾಲಣ್ಣನ ಮೊಮ್ಮಕ್ಕಳು ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅಂತಾರಲ್ಲಾ ಅಂತ ಪರಿಸ್ಥಿತಿಗೆ ಸಿಲುಕಿದ್ದಾರೆ. ಇದೆಲ್ಲದರ ನಡುವೆ ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ಆಗಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.