)
Vishnuvardhan Movie: ಪ್ಯಾನ್ ಇಂಡಿಯಾ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಇದೆಲ್ಲಾ ಈ ನಡುವೆ ಬಂದ ಟ್ರೆಂಡ್ಗಳಷ್ಟೇ. ಈ ಪದಗಳೆಲ್ಲಾ ಹುಟ್ಟಿಕೊಳ್ಳೋಕೂ ಮುಂಚೆಯೇ ಸ್ಯಾಂಡಲ್ವುಡ್ನಲ್ಲೊಂದು ಸಿನಿಮಾ ವಿಶ್ವದಾದ್ಯಂತ ಅಬ್ಬರಿಸಿತ್ತು.
ತಮ್ಮ ಅದ್ಭುತ ನಟನೆ, ಅಮೋಘ ಧ್ವನಿ ಹಾಗೂ ವಿಭಿನ್ನ ನಟನಾ ಶೈಲಿಯಿಂದಲೇ ಕೋಟಿ ಕೋಟಿ ಕನ್ನಡಿಗರ ಮನಸ್ಸು ಗೆದ್ದುಕೊಂಡಿದ್ದ ನಟ ವಿಷ್ಣುವರ್ಧನ್, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದಂತವರು. ತಮ್ಮ ಸಿನಿಮಾ ಪಯಣದಲ್ಲಿ ನಟ ವಿಷ್ಣುವರ್ಧನ್ ಅವರು ನಾನಾ ತರಹದ ಪಾತ್ರಗಳನ್ನು ಮಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ.
ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಂತಹ ನಟ ವಿಷ್ಣುವರ್ಧನ್ ಅವರಿಗೆ ಬಣ್ಣದ ಲೋಕದಲ್ಲಿ ನೆಲೆ ಕೊಂಡುಕೊಳ್ಳುವುದಕ್ಕಾಗಿ ಒಂದೊಳ್ಳೆ ಸಿನಿಮಾ ಬೇಕಾಗಿತ್ತು. ಒಂದೊಳ್ಳೆ ಸಿನಿಮಾ ಕಥೆಗಾಗಿ ಕಾಯುತ್ತಿದ್ದ ವಿಷ್ಣುವರ್ಧನ್ ಅವರನ್ನು ಆ ಸಮಯದಲ್ಲಿ ಹುಟುಕಿಕೊಂಡು ಬಂದಿದ್ದೇ ಪುಟ್ಟಣ್ಣ ಕಣಗಲ್ ಅವರ ನಾಗರಹಾವು ಚಿತ್ರ.
ಟ್ರೈಯಾಂಗಲ್ ಪ್ರೇಮಕಥೆ, ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ವಿಷ್ಣುವರ್ಧನ್ ಅವರು ಈ ಸಿನಿಮಾದಲ್ಲಿ ಮಾಡಿದ್ದ ಪಾತ್ರ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಚಿತ್ರದ ಸಂಗೀತ ಸಂಯೋಜನೆ, ಪ್ರತಿಯೊಂದು ದೃಶ್ಯ ಹಾಗೂ ಚಾಮಯ್ಯ ಮೃಷ್ಟ್ರು ಹಾಗೂ ರಾಮಾಚಾರಿ ಪಾತ್ರ ಇಂದಿಗೂ ಪ್ರೇಕ್ಷಕರ ಮನದಲ್ಲಿ ಆಳವಾಗಿ ನೆಲೆಯೂರಿದೆ. ಈ ಚಿತ್ರದ ಪ್ರತಿಯೊಂದು ದೃಶ್ಯ ಇನ್ನೂ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ.
ಈಗ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು, ಪ್ಯಾನ್ ಇಂಡಿಯಾ ಸ್ಟಾರ್ಗಳು ಹಾಗೂ ಕೋಟಿ ಕೋಟಿ ಬಾಚಿತ್ತಿರುವ ಅನೇಕ ಸಿನಿಮಾಗಳು ತೆರೆ ಮೇಲೆ ಬರುತ್ತಿರಬಹುದು. ಆದರೆ, ಕನ್ನಡದಲ್ಲೊಂದು ಸಿನಿಮಾ 1972ರಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಸದ್ದು ಮಾಡಿತ್ತು. ಅದುವೇ ನಾಗರಹಾವು. ಅಷ್ಟಕ್ಕೂ ಈ ಚಿತ್ರ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು?
ನಾಗರಹಾವು ಚಿತ್ರದ ಕಥೆಯನ್ನು ತಾರಾ ಸುಬ್ಬರಾಯ ಅವರು ಬರೆದಿದ್ದರು. ಮಾಂತ್ರಿಕ ನಿರ್ದೇಶಕನೆಂದೇ ಕರೆಯಲ್ಪಡುವ ಪುಟ್ಟಣ್ಣ ಕಣಗಲ್ ಅವರು ಈ ಚಿತ್ರವನ್ನು ನಿರ್ದೇಶಿದ್ದರು. ವಿಜಯ್ ಭಾಸ್ಕರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಇವೆಲ್ಲದ್ದಕ್ಕೂ ಮತ್ತಷ್ಟು ಬಲ ತುಂಬಿದ್ದು ವಿಷ್ಣುವರ್ಧನ್ ಅವರ ಆಂಗ್ರಿ ಯಂಗ್ ಮ್ಯಾನ್ ಪಾತ್ರ.
ಈ ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಅವರ ಅಭಿನಯವನ್ನು ನೋಡಿದ ಪ್ರೇಕ್ಷಕರು ದಾದಾ ಆಂಕ್ಟಿಂಗ್ಗೆ ಫಿದಾ ಆಗಿದ್ದರು. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ 25000 ರೂಪಾಯಿ ಕಲೆಕ್ಷನ್ ಮಾಡುತ್ತದೆ. ಎಲ್ಲಾ ಥಿಯೇಟರ್ಗಳಲ್ಲಿಯೂ ಹೌಸ್ಫುಲ್ ಪ್ರದರ್ಶನ ಕಾಣುತ್ತದೆ. 25 ವಾರಗಳ ಕಾಲ ಈ ಚಿತ್ರ ಥಿಯೇಟರ್ಗಳಲ್ಲಿ ಆಗಿನ ಕಾಲಕ್ಕೆ ಯಶಸ್ವಿ ಪ್ರದರ್ಶನ ಕಾಣುತ್ತದೆ.
ನಂತರ ಕಲರಿಂಗ್ ಎಡಿಶನ್ನಲ್ಲಿ ರಿ ರಿಲೀಸ್ ಆದ ಈ ಸಿನಿಮಾ ಮತ್ತೊಮ್ಮೆ ಥಿಯೇಟರ್ನಲ್ಲಿ ಅಬ್ಬರಿಸುತ್ತದೆ. ರಿ ರಿಲೀಸ್ ಆದ ನಂತರವೂ ವಿಷ್ಣುವರ್ಧನ್ ಅವರ ಈ ಚಿತ್ರ ಥಿಯೇಟರ್ಗಳಲ್ಲಿ ಒಂದು ಕೋಟಿ ಕಲೆಕ್ಷನ್ ಮಾಡುತ್ತದೆ. ಈ ಮೂಲಕ ನಾಗರಹಾವು ಸಿನಿಮಾ ಒಂದು ದಾಖಲೆಯನ್ನೇ ಸೃಷ್ಟಿಸುತ್ತದೆ.