"Innocent"ನಲ್ಲಿ ವಿಶ್ವಾಸ್ ಶಂಕರ್ ಜೊತೆ "ಟಗರು" ಮಾನ್ವಿತಾ ಕಾಮತ್‌

Innocent: ಹೈಕೋರ್ಟ್‌ ವಕೀಲರಾಗಿದ್ದ ವಿಶ್ವಾಸ್ ಶಂಕರ್ ಅವರು ಈಗ ತಮ್ಮ ವೃತ್ತಿಯನ್ನು ಬಿಟ್ಟು ಹೊಸದಾಗಿ ನಟನಾರಂಗಕ್ಕೆ ಇಳಿಯಲಿದ್ದಾರೆ. ಇನ್ನು ಮುಂದೆ ಸಿನಿಮಾ ರಂಗದಲ್ಲಿ ತಮ್ಮ ಜೀವನವನ್ನು ಮುಂದುವರೆಸಲು ಸಜ್ಜಾಗಿದ್ದಾರೆ.

Written by - Yashaswini V | Last Updated : Feb 25, 2025, 12:25 PM IST
  • ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದ ಫೇಮಸ್‌ ಲಾಯರ್‌ ಈಗ ಚಂದನವನದ ಮೂಲಕ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ.
  • ಸಹನಾ ಮೂರ್ತಿ ನಿರ್ದೇಶಿಸುತ್ತಿರುವ ಇನೋಸೆಂಟ್ (Innocent) ಚಿತ್ರದಲ್ಲಿ ನಾಯಕನಾಗಿ ಮೊದಲಬಾರಿ ಮಿಂಚಲಿದ್ದಾರೆ.
"Innocent"ನಲ್ಲಿ ವಿಶ್ವಾಸ್ ಶಂಕರ್ ಜೊತೆ "ಟಗರು" ಮಾನ್ವಿತಾ ಕಾಮತ್‌

Sandalwood: ವಿಶ್ವಾಸ್‌ ಶಂಕರ್‌ ನೋಡಲು ಹಿಂದಿ ನಟ ವಿಜಯ್ ವರ್ಮಾ ಅವರಂತಯೇ ಕಾಣುತ್ತಾರೆ. ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದ ಫೇಮಸ್‌ ಲಾಯರ್‌ ಈಗ ಚಂದನವನದ ಮೂಲಕ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಸಹನಾ ಮೂರ್ತಿ ನಿರ್ದೇಶಿಸುತ್ತಿರುವ ಇನೋಸೆಂಟ್ (Innocent) ಚಿತ್ರದಲ್ಲಿ ನಾಯಕನಾಗಿ ಮೊದಲಬಾರಿ ಮಿಂಚಲಿದ್ದಾರೆ.

Add Zee News as a Preferred Source

ರೋಸ್, ಲೀಡರ್ ಮತ್ತು ತ್ರಿವಿಕ್ರಮದಂತಹ ಹಿಟ್‌ ಸಿನಿಮಾಗಳ ಚಿತ್ರಗಳ ನಿರ್ದೇಶಕರಾದ  ಸಹನಾ ಮೂರ್ತಿ ಯವರು ಇದೀಗ ತಮ್ಮ ನಾಲ್ಕನೇ ಸಿನಿಮಾದ ಮಾಡುವುದಕ್ಕೆ ರೆಡಿಯಾಗಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣದ  ಕೆಲಸವನ್ನು ಪ್ರಾರಂಭವಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ- ತಿಂಗಳಲ್ಲಿ 20 ಬಾರಿ... ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿಯ ಶಾಕಿಂಗ್ ಹೇಳಿಕೆ...!

ನಿವೃತ್ತ ಐಎಎಸ್ ಅಧಿಕಾರಿ ಶಂಕರ್ ಅವರ ಪುತ್ರ ವಿಶ್ವಾಸ್ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿದ್ದಾರೆ. ಇದರೊಂದಿಗೆ ನಟನೆ ಮಾತ್ರವಲ್ಲದೆ  ಸಿನಿಮಾ ನಿರ್ಮಾಣದ ಕಡೆಗೂ ಗಮನ ಹರಿಸಿದ್ದಾರೆ. ಸ್ವತಃ ವಿಶ್ವಾಸ್‌ರವರ ನಿರ್ಮಾಣ ಸಂಸ್ಥೆಯಾದ "ಕೈಂಡ್ ಬ್ರದರ್ ಫಿಲ್ಮ್ಸ್" ಮೂಲಕ ತಮ್ಮ ಮೊದಲ ಸಿನಿಮಾ "ಇನೋಸೆಂಟ್‌" ತೆರೆಕಾಣಲಿದೆ. ಅಷ್ಟೆಅಲ್ಲದೆ ಸಂಗೀತ ಸಂಯೋಜನೆ ಸಹ ಇವರೇ ಮಾಡಲಿದ್ದಾರೆ. ವಿಶ್ವಾಸ್  ಆಡಿಯೋ ಲೇಬಲ್ ಆದ  ವಿಶ್ವಾಸ್ ಮ್ಯೂಸಿಕ್ ಅನ್ನು ಪ್ರಾರಂಭಿಸಬೇಕೆಂಬುವ ಯೋಜನೆಯನ್ನು ಸಹ ಹೊಂದಿದ್ದಾರೆ.

ಇದನ್ನೂ ಓದಿ- 'ವರ್ಜಿನಿಟಿ ಒಂದೇ ರಾತ್ರಿಯಲ್ಲಿ ಮುಗಿಯುತ್ತೆ'.. 'ಕನ್ಯತ್ವ'ದ ಬಗ್ಗೆ ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ!

ಇನ್ನು ಇವರ ಇನೋಸೆಂಟ್ ಚಿತ್ರದಲ್ಲಿ  ನಟಿಯಾಗಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ಬಣ್ಣ ಹಚ್ಚಲಿದ್ದಾರೆ.  ಚಿತ್ರತಂಡ ಮತ್ತೋರ್ವ ನಾಯಕಿಯ ಹುಡುಕಾಟದಲ್ಲಿದ್ದು, ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರಕ್ಕೆ ಸಹನಾ ಮೂರ್ತಿ ಅವರ ಪ್ರಾಜೆಕ್ಟ್‌ಗಳಲ್ಲಿ ಈ ಹಿಂದೆ ಕೆಲಸ ಮಾಡಿದ ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣ ನಿರ್ವಹಿಸಲಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News