close

News WrapGet Handpicked Stories from our editors directly to your mailbox

ಬಾಕ್ಸ್ ಆಫೀಸ್ ನಲ್ಲಿ 'ವಾರ್' ಸಿನಿಮಾದಿಂದ ಸಾರ್ವಕಾಲಿಕ ದಾಖಲೆ

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ಹೊಸ ಚಿತ್ರ ವಾರ್ ಮೊದಲ ದಿನ 53 ಕೋಟಿ ರೂ. ಗಳಿಸುವ ಮೂಲಕ ನೂತನ ದಾಖಲೆ ನಿರ್ಮಾಣ ಮಾಡಿದೆ ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

Updated: Oct 3, 2019 , 04:22 PM IST
ಬಾಕ್ಸ್ ಆಫೀಸ್ ನಲ್ಲಿ 'ವಾರ್' ಸಿನಿಮಾದಿಂದ ಸಾರ್ವಕಾಲಿಕ ದಾಖಲೆ
Photo courtesy: Twitter

ನವದೆಹಲಿ: ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ಹೊಸ ಚಿತ್ರ ವಾರ್ ಮೊದಲ ದಿನ 53 ಕೋಟಿ ರೂ. ಗಳಿಸುವ ಮೂಲಕ ನೂತನ ದಾಖಲೆ ನಿರ್ಮಾಣ ಮಾಡಿದೆ ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಅಮೀರ್ ಖಾನ್ ಅವರ 2018 ರ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್  ಬಾಲಿವುಡ್ ನಲ್ಲಿ ಉತ್ತಮ ಆರಂಭ ಕಂಡ ಸಿನಿಮಾವಾಗಿತ್ತು, ಆದರೆ ಈಗ ಅದನ್ನು ವಾರ್ ಹಿಂದಿಕ್ಕಿದೆ.ಬುಧವಾರದಂದು ವಾರ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸುಮಾರು 4,000 ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ಈ ಚಿತ್ರದ ಹಿಂದಿ ಆವೃತ್ತಿಯಿಂದ ರೂ. 51.60 ಕೋಟಿ ಗಳಿಕೆಯಾಗಿದ್ದರೆ, ತಮಿಳು ಮತ್ತು ತೆಲುಗು 1.75 ಕೋಟಿ ರೂ ಎನ್ನಲಾಗಿದೆ.

ದಕ್ಷಿಣ ಭಾರತದಲ್ಲಿ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಅಬ್ಬರಿಸುತ್ತಿರುವುದರಿಂದ ವಾರ್ ಗಳಿಕೆ ಮೇಲೆ ಪ್ರಭಾವ ಬಿರಿದೆ ಎನ್ನಲಾಗಿದೆ