ರೆಬಲ್ ಸ್ಟಾರ್ ಅಂಬರೀಶ್, ಸಂಸದೆ ಸುಮಲತಾ ಅವರ ಪುತ್ರ ನಟ ಅಭಿಷೇಕ್ ಅಂಬರೀಷ್ ತಾವು ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು (ಜೂನ್ 5ರಂದು) ಮರಿ ರೆಬಲ್ ಸ್ಟಾರ್ ಅಭಿಶೇಕ್ ತಮ್ಮ ಬಹು ದಿನದ ಗೆಳತಿ ಅವಿವಾ ಬಿದ್ದಪ್ಪ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಒಕ್ಕಲಿಗ ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ಸಪ್ತಪದಿ ತುಳಿದಿದ್ದಾರೆ.
ಮದುವೆ ಸಮಯದಲ್ಲಿ ವಧುವಿಗೆ ಅಂಬಿ ಪುತ್ರ ಅರುಂಧತಿ ನಕ್ಷತ್ರ ತೋರಿದ ಸಂದರ್ಭ.
ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ ನಡೆಸುತ್ತಿರುವ ಅವಿವಾ ಬಿದ್ದಪ್ಪ ಫ್ಯಾಷನ್ ಡಿಸೈನರ್, ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅವಿವಾ ಕುಟುಂಬಸ್ಥರು ಮದುಮಗ ಅಭಿಷೇಕ್ ಅಂಬರೀಷ್ ಅವರಿಗೆ ಬಿಎಂ ಡಬ್ಯು ಕಾರು ಗಿಫ್ಟ್ ನೀಡಿದ್ದಾರೆ.
ಅಭಿಷೇಕ್ ಅಂಬರೀಶ್ ಗೆ ಅವಿವಾ ಕಡೆಯಿಂದ ಸರ್ಪೈಸ್ ಗಿಫ್ಟ್ (BMW X 7 ಕಾರು ಗಿಫ್ಟ್) ನೀಡಲಾಗಿದೆ.
ಈ ಕಾರಿನ ಮೌಲ್ಯ ಬರೋಬ್ಬರಿ ಒಂದೂವರೆ ಕೋಟಿ ಎಂದು ಹೇಳಲಾಗುತ್ತಿದೆ.