ಕತ್ರಿನಾ ಕೈಫ್

ಕತ್ರಿನಾ ಕೈಫ್ ಜನ್ಮನಾಮ ಕತ್ರಿನಾ ಟರ್ಕೋಟ್ ಆಗಿತ್ತು. ಆರಂಭದಲ್ಲಿ ತನ್ನ ತಾಯಿಯ ಉಪನಾಮವನ್ನು ಹೆಸರಿನ ಜೊತೆ ಅವರು ಸೇರಿಸಿಕೊಳ್ಳುತ್ತಿದ್ದರು. ಆದರೆ ಭಾರತಕ್ಕೆ ಆಗಮಿಸಿದ ತನ್ನ ತಂದೆಯ ಉಪನಾಮ ಕೈಫ್ ಅನ್ನು ಅಳವಡಿಸಿಕೊಂಡರು.

Bhavishya Shetty
Feb 17,2023

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಅವರ ನಿಜವಾದ ಹೆಸರು ಸಾಜಿದ್ ಅಲಿ ಖಾನ್. ಕರೀನಾ ಕಪೂರ್ ತಮ್ಮ ಮದುವೆಯ ಪ್ರಮಾಣಪತ್ರದ ನಕಲು ಪ್ರತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವವರೆಗೆ ಈ ವಿಚಾರ ತಿಳಿದಿರಲಿಲ್ಲ.

ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಹೆಸರು ಜೈ ಹೇಮಂತ್ ಶ್ರಾಫ್. ಮಗುವಾಗಿದ್ದಾಗ ಹುಲಿಯಂತೆ ಕಚ್ಚುತ್ತಿದ್ದ ಕಾರಣ ಅವರ ತಂದೆ ಜಾಕಿ ಶ್ರಾಫ್ ಅವರನ್ನು ಪ್ರೀತಿಯಿಂದ ಟೈಗರ್ ಎಂದು ಕರೆಯುತ್ತಿದ್ದರು.

ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಅವರ ನಿಜವಾದ ಹೆಸರು ಆಲಿಯಾ ಅಡ್ವಾಣಿ. ಉತ್ತಮ ಮನ್ನಣೆಗಾಗಿ ಆಲಿಯಾ ಎಂಬ ಹೆಸರನ್ನು ಬದಲಾಯಿಸುವಂತೆ ಸಲಹೆ ನೀಡಿದವರು ಸಲ್ಮಾನ್ ಖಾನ್.

ಆಯುಷ್ಮಾನ್ ಖುರಾನಾ

ಆಯುಷ್ಮಾನ್ ಖುರಾನಾ ಅವರು ಜನಿಸಿದಾಗ ನಿಶಾಂತ್ ಖುರಾನಾ ಎಂದು ನಾಮಕರಣ ಮಾಡಲಾಗಿರತ್ತು.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಮೂಲ ಹೆಸರು ಅಶ್ವಿನಿ ಶೆಟ್ಟಿ. ಆದರೆ ಆಕೆಯ ತಾಯಿ ಸುನಂದಾ ಶೆಟ್ಟಿ ನಂತರ ಆಕೆಯ ಹೆಸರನ್ನು ಶಿಲ್ಪಾ ಎಂದು ಬದಲಾಯಿಸಿದರು.

ಶ್ರೀದೇವಿ

ದಿವಂಗತ ನಟಿ ಶ್ರೀದೇವಿ ಅವರ ಮೂಲ ಹೆಸರು ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್.

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್ ಅವರನ್ನು ಇಂಕ್ವಿಲಾಬ್ ಶ್ರೀವಾಸ್ತವ ಎಂದು ಕರೆಯಲಾಗುತ್ತಿತ್ತು. ಆದರೆ, ಪ್ರಸಿದ್ಧ ಭಾರತೀಯ ಕವಿ ಸುಮಿತ್ರಾನಂದನ್ ಪಂತ್ ಅವರ ಸಲಹೆಯ ಮೇರೆಗೆ ಅದನ್ನು ನಂತರ ಅಮಿತಾಭ್ ಎಂದು ಬದಲಾಯಿಸಲಾಯಿತು.

ಸನ್ನಿ ಲಿಯೋನ್

ಸನ್ನಿ ಲಿಯೋನ್ ಅವರ ನಿಜವಾದ ಹೆಸರು ಕರೆಂಜಿತ್ ಕೌರ್ ವೋಹ್ರಾ.

VIEW ALL

Read Next Story