ನೋಡಲು ಮುದ್ದಾಗಿರುವ ಈ ನಟಿ ಆಗಾಗ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ.
ಇದೀಗ ಕೊಡಗಿನ ಸಾಂಪ್ರದಾಯಿಕ ರೀತಿಯಲ್ಲಿ ಸೀರೆಯುಟ್ಟು ನಟಿ ಆಶಿಕಾ ರಂಗನಾಥ್ ಮಿಂಚಿದ್ದಾರೆ.
ಮೊದಲ ಬಾರಿಗೆ ಕೊಡವ ಶೈಲಿಯಲ್ಲಿ ಸಿರೆಯುಟ್ಟ ಅನುಭವ ಹಂಚಿಕೊಂಡಿದ್ದಾರೆ.
ಸ್ನೇಹಿತೆಯ ಮದುವೆಗೆಂದು ಆಶಿಕಾ ರಂಗನಾಥ್ ಈ ರೀತಿ ರೆಡಿಯಾಗಿದ್ದಾರೆ.
ಕೇಸರಿ ಬಣ್ಣದ ಸೀರೆಯುಟ್ಟು ಅದಕ್ಕೆ ಮ್ಯಾಚಿಂಗ್ ಜ್ಯುವೆಲರಿ ಹಾಕಿರುವ ಆಶಿಕಾ, ಕೂದಲನ್ನು ಹಿಂದೆ ಕಟ್ಟಿ ಅದಕ್ಕೆ ಮಲ್ಲಿಗೆ ಮುಡಿದಿದ್ದಾರೆ.
ಅಮ್ಮ ಮತ್ತು ಸಹೋದರಿಯ ಜೊತೆ ಹೆಳತಿಯ ಮದುವೆ ಸಮಾರಂಭದಲ್ಲಿ ಆಶಿಕಾ ಭಾಗಿಯಾಗಿದ್ದಾರೆ.
ಈ ಫೋಟೋಗಳನ್ನು ನೋಡಿದ ಆಶಿಕಾ ರಂಗನಾಥ್ ಅಭಿಮಾನಿಗಳು ಮನಸೋತಿದ್ದಾರೆ.