ಈ ಪ್ರಕರಣದಲ್ಲಿ ಐಟಿ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮೆನಶೆರಿ ಎಂಬಾತನು ಈ ದೂರು ಸಲ್ಲಿಸಿದ್ದು, ಶ್ವೇತಾ ಅವರು ಕೆಲವು ಅಶ್ಲೀಲ ಚಿತ್ರಗಳಲ್ಲಿ ನಗ್ನ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಕೆಲವು ಕಾಂಡೋಮ್ ಜಾಹೀರಾತುಗಳಲ್ಲಿಯೂ ಅವರು ನಟಿಸಿದ್ದು, ಇವುಗಳಲ್ಲಿ ಅಶ್ಲೀಲತೆಯಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಚಿತ್ರಗಳು ಮತ್ತು ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ವಯಸ್ಕರ ವೆಬ್‌ಸೈಟ್‌ಗಳ ಮೂಲಕ ಪ್ರಸಾರ ಮಾಡಲಾಗಿದ್ದು, ಇದರಿಂದ ಶ್ವೇತಾ ಆರ್ಥಿಕ ಲಾಭ ಪಡೆದಿದ್ದಾರೆ ಎಂದು ದೂರುದಾರರು ಆಪಾದಿಸಿದ್ದಾರೆ.
ಚಂಡೀಗಢ ಮೂಲದ ಶ್ವೇತಾ ಮೆನನ್ 1991ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಅವರು, ಕನ್ನಡದಲ್ಲಿ ಉಪೇಂದ್ರ ಅಭಿನಯದ ‘ಓಂಕಾರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟಿಯಾಗಿ, ಮಾಡೆಲ್ ಆಗಿ, ಮತ್ತು ಟಿವಿ ಆಂಕರ್ ಆಗಿಯೂ ಗಮನ ಸೆಳೆದಿರುವ ಶ್ವೇತಾ, 2018ರಲ್ಲಿ ‘ಬಿಗ್ ಬಾಸ್ ಮಲಯಾಳಂ ಸೀಸನ್ 1’ರಲ್ಲಿ ಸ್ಪರ್ಧಿಯಾಗಿ ಒಂದು ತಿಂಗಳ ಕಾಲ ಭಾಗವಹಿಸಿದ್ದರು. ತಮ್ಮ ಬೋಲ್ಡ್ ಪಾತ್ರಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದಾರೆ.
ಈ ಆರೋಪಗಳ ಹಿಂದೆ ರಾಜಕೀಯ ಉದ್ದೇಶವಿರಬಹುದು ಎಂಬ ಊಹಾಪೋಹಗಳು ಕೇಳಿಬಂದಿವೆ. ಶ್ವೇತಾ ಮೆನನ್, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಈ ದೂರಿನಿಂದ ಅವರನ್ನು ಚುನಾವಣೆಯ ರೇಸ್‌ನಿಂದ ಹೊರಗಿಡಲು ಯಾರೋ ಸಂಚು ರೂಪಿಸಿರಬಹುದು ಎಂಬ ಚರ್ಚೆ ನಡೆಯುತ್ತಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಶ್ವೇತಾ ಮೆನನ್ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರು ಈ ವಿವಾದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಎರ್ನಾಕುಲಂ ಸಿಜೆಎಂ ಕೋರ್ಟ್‌ನ ಆದೇಶದಂತೆ, ಪೊಲೀಸರು ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಐಟಿ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ದಾಖಲಾದ ಈ ಕೇಸ್, ಶ್ವೇತಾ ಅವರ ವೃತ್ತಿಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಈ ಆರೋಪಗಳು ಸಾಬೀತಾದಲ್ಲಿ, ಅವರ ಚಿತ್ರರಂಗದ ಖ್ಯಾತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ.
ಕನ್ನಡ, ಮಲಯಾಳಂ, ಹಿಂದಿ ಚಿತ್ರರಂಗದ ಖ್ಯಾತ ನಟಿ ಶ್ವೇತಾ ಮೆನನ್ (51) ವಿರುದ್ಧ ಅಶ್ಲೀಲ ಚಿತ್ರಗಳಲ್ಲಿ ನಟಿಸಿ, ವಿಡಿಯೋಗಳನ್ನು ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮೆನಶೆರಿ ದೂರಿನ ಮೇರೆಗೆ ಎರ್ನಾಕುಲಂ ಸಿಜೆಎಂ ಕೋರ್ಟ್ ಪೊಲೀಸರಿಗೆ ತನಿಖೆಗೆ ಆದೇಶಿಸಿದೆ. ಐಟಿ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಕೇಸ್ ದಾಖಲಾಗಿದೆ. ಕಾಂಡೋಮ್ ಜಾಹೀರಾತುಗಳಲ್ಲಿಯೂ ನಗ್ನತೆ ಆರೋಪವಿದೆ.