ಪ್ರೀ ಬುಕಿಂಗ್‌ನಲ್ಲಿ 'ಕಲ್ಕಿ 2898 AD' ಬೊಗಸೆ ಸೇರಿತು ಅರ್ಧ ಮಿಲಿಯನ್‌..!

Zee Kannada News Desk
Jun 10,2024

'ಕಲ್ಕಿ 2898 AD'

ರಿಲೀಸ್‌ಗೂ ಮುನ್ನ ಕಲ್ಕಿ 2898 AD ಸದ್ದು

ಟ್ರೇಲರ್‌ ರಿಲೀಸ್‌

ಅನೌನ್ಸ್‌ಮೆಂಟ್‌ ಆದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ 'ಕಲ್ಕಿ 2898 AD' ಸಿನಿಮಾದ ಟ್ರೇಲರ್‌ ಇಂದು ರಿಲೀಸ್‌ ಆಗುತ್ತಿದೆ.

ಸ್ಟಾರ್‌ ನಟರ ತಾರಾ ಬಳಗ

'ಕಲ್ಕಿ 2898 AD' ಸಿನಿಮಾದಲ್ಲಿ ಕಮಲ್‌ ಹಸನ್‌, ದಿಶಾ ಪಟಾನಿ, ಪ್ರಭಾಸ್‌, ಅಮಿತಾಬ್‌ ಬಚನ್‌, ದುಲ್ಕರ್‌ ಸಲ್ಮಾನ್‌ ಸೇರಿದಂತೆ ಈ ಚಿತ್ರದಲ್ಲಿ ಸ್ಟಾರ್‌ ನಟರ ತಾರಾ ಬಳಗವಿದೆ.

'ಕಲ್ಕಿ 2898 AD'

'ಕಲ್ಕಿ 2898 AD' ಚಿತ್ರ ಭಾರತದಷ್ಟೇ ಅಲ್ಲ ಉತ್ತರ ಅಮೇರಿಕಾದಲ್ಲೂ ಬಿರುಗಾಳಿ ಎಬ್ಬಿಸಿದೆ.

'ಕಲ್ಕಿ 2898 AD' ಪ್ರೀ ಬುಕಿಂಗ್‌

ಟ್ರೇಲರ್‌ ಬಿಡುಗಡೆಗೂ ಮುಂಚೆಯೇ 'ಕಲ್ಕಿ 2898 AD' ಸಿನಿಮಾದ ಪ್ರೀ ಬುಕಿಂಗ್‌ ಶುರುವಾಗಿದೆ. ಉತ್ತರ ಅಮೇರಿಕಾದಲ್ಲಿ ಸಿನಿಮಾ ಟಿಕೆಟ್ಸ್‌ ಪ್ರೀ ಬುಕಿಂಗ್‌ಗೆ ಜನ ಮುಗಿಬಿದ್ದಿದ್ದಾರೆ.

ಮಿಲಿಯನ್‌ ಡಾಲರ್‌

ಸಿನಿಮಾದ ಪ್ರೀ ಬುಕಿಂಗ್‌ ಶುರುವಾಗಿ ನಾಲ್ಕು ದಿನಗಳಷ್ಟೇ ಕಳೆದಿವೆ. ಆದರೆ ಈಗಾಗಲೇ ಈ ಸಿನಿಮಾ ಅರ್ಧ ಮಿಲಿಯನ್‌ ಡಾಲರ್‌ಗಳನ್ನ ತನ್ನ ಬೊಗಸೆಗೆ ಹಾಕಿಕೊಂಡಿದೆ.

ಜೂನ್‌ 27ಕ್ಕೆ ರಿಲೀಸ್‌

ಜೂನ್‌ 27 ರಂದು 'ಕಲ್ಕಿ 2898 AD' ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ.

ಯುಎಸ್‌ಎ

ಚಿತ್ರದ ಮೊದಲ ಪ್ರದರ್ಶನ ಜೂನ್‌ 26 ರಂದು ಯುಎಸ್‌ಎ(USA)ಯಲ್ಲಿ ಆಗಲಿದೆ.

VIEW ALL

Read Next Story