ಬಾಲಿವುಡ್ ಮಂದಿ

ಕೆಲವು ಬಾಲಿವುಡ್ ಮಂದಿ ಪಾರ್ಟಿಯಲ್ಲಿ ಸಮಯ ಕಳೆಯುವುದಕ್ಕಿಂತ ಹೆಚ್ಚು ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆಯುತ್ತಾರೆ.

Ranjitha R K
Mar 20,2023

ಜೂಹಿ ಚಾವ್ಲಾ

ಮಾಜಿ ಮಿಸ್ ಇಂಡಿಯಾ. ನಟಿ ಜೂಹಿ ಚಾವ್ಲಾ ಕೂಡಾ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಲಾಕ್ ಡೌನ್ ವೇಳೆ ಅನೇಕ್ ರೈತರಿಗೆ ನೆರವಾಗಿದ್ದರು ಕೂಡಾ.

ಧರ್ಮೆಂದ್ರ

ಹಿರಿಯ ನಟ ಧರ್ಮೆಂದ್ರ ಪ್ರಕೃತಿ ಮಡಿಲಲ್ಲಿ ಬಹಳಷ್ಟು ಹೊತ್ತು ಕಳೆಯುತ್ತಾರೆ. ಇವರು ತಮ್ಮ ಫಾರ್ಮ್ ಹೌಸ್ ನಲ್ಲಿ ಹಣ್ಣು ತರಕಾರಿಗಳನ್ನು ಬೆಳೆಯುತ್ತಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಯೋಗ, ವ್ಯಾಯಾಮ ಮಾತ್ರವಲ್ಲ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಕೂಡಾ ಬಾಲಿವುಡ್ ಪಾರ್ಟಿ ಗಳಿಂದ ದೂರ ಉಳಿಯುತ್ತಾರೆ. ಅವರು ತೋಟಗಾರಿಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.

ಭೂಮಿ ಫಡ್ನೆಕರ್

ನಟಿ ಭೂಮಿ ಫಡ್ನೆಕರ್ ತಮ್ಮ ಮನೆಯಲ್ಲಿಯೇ ತೋಟಗಾರಿಕೆ ನಡೆಸುತ್ತಾರೆ. ಇದಕ್ಕೆ ಅವರ ತಾಯಿ ಕೂಡಾ ಪ್ರೋತ್ಸಾಹ ನೀಡುತ್ತಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ತನ್ನ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಹೊತ್ತು ಸಮಯ ಕಳೆಯುತ್ತಾರೆ. ಕೊವಿಡ್ ಸಮಯದಲ್ಲಿ ಅವರು ಇಲ್ಲೇ ಕಾಲ ಕಳೆದಿದ್ದರು.

ಟ್ವಿಂಕಲ್ ಖನ್ನಾ

ಟ್ವಿಂಕಲ್ ಖನ್ನಾಗೆ ಹಸಿರಿನ ಮಧ್ಯೆ ಕಾಲ ಕಳೆಯುವುದು ಇಷ್ಟ. ಅವರು ತಮ್ಮ ಬಿಡುವಿನ ಸಮಯವನ್ನು ಪ್ರಕೃತಿಯ ಮಧ್ಯೆಯೇ ಕಳೆಯುತ್ತಾರೆ.

ಪ್ರೀತಿ ಜಿಂಟಾ

ಪ್ರೀತಿ ಜಿಂಟಾ, ಆರ್ ಮಾಧವನ್, ಜಾಕಿ ಶ್ರಾಫ್ ಮುಂತಾದವರು ಕೂಡಾ ತೋಟಗಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ.

VIEW ALL

Read Next Story