1. ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
2. ಈ ಚಿತ್ರದಲ್ಲಿ ಶಾರುಖ್ ಖಾನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲ್ದಿದಾರೆ. ಕೋಯಿ ಮೊಯಿ ಡಾಟ್ ಇನ್ ವರದಿಯ ಪ್ರಕಾರ ಶಾರುಖ್ ಈ ಚಿತ್ರದಲ್ಲಿ ಅಭಿನಯಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
3. ಈ ಚಿತ್ರದ ನಾಯಕಿ ನಟಿಯಾಗಿರುವ ದೀಪಿಕಾ ಪಡುಕೋಣೆ, ಈ ಚಿತ್ರಕ್ಕಾಗಿ 15 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
4. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಜಾನ್ ತಮ್ಮ ಪಾತ್ರದ ಅಭಿನಯಕ್ಕಾಗಿ 20ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
5. ಈ ಚಿತ್ರದಲ್ಲಿ ಭಾಯಿಜಾನ್ ಸಲ್ಮಾನ್ ಖಾನ್ ಕೂಡ ಕೆಮಿಯೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸಲ್ಮಾನ್ ತಮ್ಮ ಪಾತ್ರಕ್ಕೆ ಬಿಡಿಕಾಸೂ ಸಂಭಾವನೆ ಪಡೆದುಕೊಂಡಿಲ್ಲ ಎನ್ನಲಾಗಿದೆ.