2008ರಲ್ಲಿ ತೆರೆಕಂಡ ಈ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.
ಆ ಬಳಿಕ ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು ಮುಂತಾದ ಕನ್ನಡ ಚಿತ್ರಗಳಲ್ಲಿ ಹರಿಪ್ರಿಯಾ ನಟಿಸಿದರು.
2014ರಲ್ಲಿ ತೆರೆಕಂಡ ಉಗ್ರಂ ಸಿನಿಮಾ ಹರಿಪ್ರಿಯಾ ವೃತ್ತಿಜೀವನಕ್ಕೆ ತಿರುವು ನೀಡಿತು.
ಉಗ್ರಂ ಸಿನಿಮಾ ಬಳಿಕ ಹಲವಾರು ಅವಕಾಶಗಳನ್ನು ಅವರು ಪಡೆದರು.
ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಕೂಡ ಹರಿಪ್ರಿಯಾ ನಟಿಸಿದ್ದಾರೆ.
ಈಗ ನಟಿ ಹರಿಪ್ರಿಯಾ ಅವರು ವಸಿಷ್ಠ ಸಿಂಹ ಜೊತೆ ಮದುವೆಯಾಗಿದ್ದಾರೆ.
ನಟಿ ಹರಿಪ್ರಿಯಾ ಹೊಸದಾಗಿ ಯುಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ.