ಏನು ಆಸೆ-ಕನಸು-ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಬಂದ ಭಾಗ್ಯವನ್ನು ಸದುಪಯೋಗಿಸಿಕೊಂಡಿರುವ ನೂರಾರು ನಟ ನಟಿಯರಲ್ಲಿ ನಟಿ ರಕ್ಷಾ ಕೂಡ ಒಬ್ಬರು.
'ರಾಧಾ ರಮಣ' ಧಾರಾವಾಹಿ ಮೂಲಕ ತಮ್ಮ ನಟನಾ ಜರ್ನಿಯನ್ನು ಆರಂಭಿಸಿ ಮುಂದೆ 'ಪುಟ್ಮಲ್ಲಿ' ಎಂಬ ಕನ್ನಡ ಧಾರಾವಾಹಿಯಲ್ಲಿ ನಾಯಕಿ ಆಗಿ ಕಾಣಿಸಿಕೊಂಡ ಬೆಡಗಿ.
ಅಸಲಿಗೆ ರಕ್ಷಾ ಅವರಿಗೆ ಚೆನ್ನಾಗಿ ಓದಿ ಐಎಎಸ್ ಅಧಿಕಾರಿಯಾಗಬೇಕೆಂಬ ಮಹಾದಾಸೆ ಇತ್ತಂತೆ.
ಉತ್ತಮ ಅಭಿನಯದ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ರಕ್ಷಾ ಇದೀಗ ಕನ್ನಡ ಮ ಆದರೆ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ.
ಆಡಿಶನ್‌ಗಳಲ್ಲಿ ಪಾಸ್ ಆದ ರಕ್ಷಾ ಮುಂದೆ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡುತ್ತ ಕಿರುತೆರೆ ಅಂಗಳದಲ್ಲಿ ಸೈ ಎನಿಸಿಕೊಂಡ ಬೆಡಗಿ.
'ಗುಪ್ಪೆದಂಥ ಮನಸು' ಧಾರಾವಾಹಿ 'ಹೊಂಗನಸು' ಹೆಸರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಆ ಮೂಲಕ ಕನ್ನಡ ವೀಕ್ಷಕರನ್ನು ರಂಜಿಸುತ್ತಿದ್ದಾರೆ ರಕ್ಷಾ.