ಆರ್‌ಆರ್‌ಆರ್ ʼನಾಟು ನಾಟುʼ ಹಾಡು ಭಾರತವಷ್ಟೇ ಅಲ್ಲ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.
ಈ ಹಾಡಿಗಾಗಿ ರಾಜಮೌಳಿ, ಎನ್‌ಟಿಆರ್, ರಾಮ್‌ಚರಣ್ ಎಷ್ಟು ಕಷ್ಟ ಪಟ್ಟಿದ್ದರು.
ಇದೀಗ ಭಾರತೀಯ ಸಿನಿರಂಗದಲ್ಲೇ ಪ್ರಪ್ರಥಮ ಬಾರಿಗೆ ಆರ್‌ಆರ್‌ಆರ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ ನಂತರ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದ್ದಕ್ಕೆ RRR ತಂಡ ಸಂತೋಷ ವ್ಯಕ್ತಪಡಿಸಿದೆ.
ಪ್ರಸ್ತುತ RRR ತಂಡ ಕ್ಯಾಲಿಫೋರ್ನಿಯಾದಲ್ಲಿದ್ದು, ಸಕ್ಸಸ್‌ನ್ನು ಸಂಭ್ರಮಿಸುತ್ತಿದೆ.
ಈ ಹಿಂದೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ನಿಂದ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದಿದ್ದರು.
ಇದುವರೆಗೆ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಯಾವುದೇ ಭಾರತೀಯ ಚಿತ್ರ ಪ್ರಶಸ್ತಿ ಪಡೆದಿಲ್ಲ.
ಎಮ್‌ಎಮ್ ಕೀರವಾಣಿ ಸಂಗೀತ ನಿರ್ದೇಶನದ ನಾಟು ನಾಟು ಹಾಡಿಗೆ ಈ ಪ್ರಶಸ್ತಿ ಲಭಿಸಿದೆ.