ಈ ಚಿತ್ರದ ಟ್ರೇಲರ್ ಬಿಡುಗಡೆಯಾದ ದಿನದಿಂದ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ.
ಇದೇ ವೇಳೆ ಚಿತ್ರದಲ್ಲಿ ನಾಯಕಿ ನಿಧಿ ಅಗರ್ವಾಲ್ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ
ಫೋಟೋದಲ್ಲಿ ನಿಧಿ ಕೆಂಪು ಬಣ್ಣದ ಸೀರೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಪ್ರಸ್ತುತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನಿಧಿ ಅಗರ್ವಾಲ್ ಟೈಗರ್ ಶ್ರಾಫ್ ಮುನ್ನಾ ಮೈಕೆಲ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಸವ್ಯಸಾಚಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು.
ಇಸ್ಮಾರ್ಟ್ ಶಂಕರ್ ನಂತರ, ನಿಧಿ ಅಗರ್ವಾಲ್ ಅವರ ಕ್ರೇಜ್ ಬದಲಾಯಿತು. ಇಸ್ಮಾರ್ಟ್ ಸೌಂದರ್ಯದಿಂದ ಜನರನ್ನು ಹುಚ್ಚರನ್ನಾಗಿ ಮಾಡಿದರು.
ನಿಧಿ ತೆಲುಗು ಮತ್ತು ತಮಿಳುನಾಡಿನಲ್ಲಿ ಬೇಡಿಕೆ ಹೀರೋಯಿನ್ ಆಗಿದ್ದಾರೆ. ಜೊತೆಗೆ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಾರೆ.
ವಿಶೇಷ ಅಂದ್ರೆ, ತಮಿಳುನಾಡಿನಲ್ಲಿ ಈ ಸುಂದರಿಗಾಗಿ ಒಂದು ದೇವಾಲಯವನ್ನು ಸಹ ನಿರ್ಮಿಸಲಾಗಿದೆ.
ಪ್ರಸ್ತುತ ಹರಿಹರ ವೀರಮಲ್ಲು ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ನಿಧಿ ಅಗರ್ವಾಲ್ ರೆಡಿಯಾಗಿದ್ದಾರೆ.