ನಟಿ ಶೆಫಾಲಿ ಜರಿವಾಲಾ ನಿಧನರಾಗಿದ್ದಾರೆ. ಈ ಆಘಾತಕಾರಿ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಪ್ರಸಿದ್ಧ ತಾರೆಯರು ಈಗ ಶೆಫಾಲಿ ಜರಿವಾಲಾ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಮತ್ತು ಶೆಫಾಲಿ ಅಭಿಮಾನಿಗಳು ದುಃಖ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.
2002 ರಲ್ಲಿ ಅವರ 'ಕಾಂಟಾ ಲಗಾ' ಹಾಡು ಬಿಡುಗಡೆಯಾದಾಗ ಶೆಫಾಲಿ ಜರಿವಾಲಾ ಪ್ರಸಿದ್ಧರಾದರು. ಈ ಹಾಡು ಎಷ್ಟು ಹಿಟ್ ಆಗಿತ್ತೆಂದರೆ ಶೆಫಾಲಿ ರಾತ್ರೋರಾತ್ರಿ ತಾರೆಯಾದರು.
ಇದಾದ ನಂತರ, ಅವರು 'ಮುಜ್ಸೆ ಶಾದಿ ಕರೋಗಿ' ನಂತಹ ಅನೇಕ ಸಂಗೀತ ಆಲ್ಬಮ್‌ಗಳು ಮತ್ತು ಹಲವು ಚಲನಚಿತ್ರಗಳಲ್ಲಿಯೂ ನಟಿಸಿದರು.
'ಬಿಗ್ ಬಾಸ್ 13' ಮತ್ತು 'ನಚ್ ಬಲಿಯೇ 5' ನಂತಹ ರಿಯಾಲಿಟಿ ಟಿವಿ ಕಾರ್ಯಕ್ರಮಗಳಲ್ಲಿಯೂ ಶೆಫಾಲಿ ಕಾಣಿಸಿಕೊಂಡಿದ್ದರು.
ಶೆಫಾಲಿ ಜರಿವಾಲಾ ಅವರಿಗೆ 42 ವರ್ಷ ವಯಸ್ಸಾಗಿತ್ತು. ಮಾಹಿತಿಯ ಪ್ರಕಾರ, ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಕನ್ನಡದ ಸಿನಿಮಾದಲ್ಲಿಯೂ ನಟಿಸಿರುವ ಶೆಫಾಲಿ ಪುನೀತ್ ರಾಜ್ ಕುಮಾರ್ ನಟನೆಯ ಹುಡುಗರು ಸಿನಿಮಾದ ʻಪಂಕಜ...ʼ ಹಾಡಿನಲ್ಲಿ ನೃತ್ಯ ಮಾಡಿದ್ದರು.
ಕೆಲವು ಮಾಧ್ಯಮ ವರದಿಗಳು ನಟಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಶೆಫಾಲಿ ಜರಿವಾಲಾ ನಿಧನದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಸಾವಿನ ಸಮಯದ ಪರಿಸ್ಥಿತಿಯನ್ನು ತನಿಖೆ ಮಾಡಲು ವಿಧಿವಿಜ್ಞಾನ ತಂಡ ಆಗಮಿಸಿದೆ ಎಂದು ಹೇಳಲಾಗುತ್ತಿದೆ.