ಮೇಘಾ ಶೆಟ್ಟಿ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ.
ಕಿರುತೆರೆಯಲ್ಲಿ ಮತ್ತು ಸಿನಿರಂಗದಲ್ಲಿ ಮೇಘಾ ಶೆಟ್ಟಿ ಸಕ್ರಿಯವಾಗಿದ್ದಾರೆ. ಕನ್ನಡದ ಜೊತೆ ಜೊತೆಯಲಿ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು.
ಮೇಘಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮೇಘಾ ಶೆಟ್ಟಿ ಇಲ್ಲಿಯವರೆಗೆ ಮೂರು ಚಲನಚಿತ್ರಗಳನ್ನು ಮಾಡಿದ್ದಾರೆ. ಇನ್ನೂ ಎರಡು ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ.
ಮೇಘಾ ಶೆಟ್ಟಿ SIIMA ಪ್ರಶಸ್ತಿಯನ್ನು ಸಹ ಪಡೆದರು. ಮೇಘಾ ಶೆಟ್ಟಿ ಕರ್ನಾಟಕದಲ್ಲಿ ಸಿನಿ ಕರಿಯರ್ ಆರಂಭಿಸಿ ಈಗ ತೆಲುಗಿನಲ್ಲಿ ಮಿಂಚುತ್ತಿದ್ದಾರೆ.
ಮೇಘಾ ಕ್ಲಾಸಿಕ್ ಉಡುಪುಗಳು, ಆಧುನಿಕ ಉಡುಪುಗಳು, ಪಾರ್ಟಿವೇರ್‌ಗಳು ಮತ್ತು ಡಿಸೈನರ್ ಸೀರೆಗಳನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ.
ಮೇಘಾ ಶೆಟ್ಟಿ 'ತ್ರಿಬಲ್ ರೈಡಿಂಗ್' ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. ದಿಲ್ ಪಸಂದ್, ಕೈವ ಸಿನಿಮಾದಲ್ಲೂ ನಟಿಸಿದ್ದಾರೆ.
ಚೀತಾ ಮತ್ತು ಗ್ರಾಮಾಯಣ ತೆರೆಗೆ ಬರಬೇಕಿದೆ. ತಮಿಳು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.
ಆಗಸ್ಟ್ 4 ರಂದು ನಟಿ ಮೇಘಾ ಶೆಟ್ಟಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.