ಕನ್ನಡ ಖ್ಯಾತ ನಟಿ ಶ್ರೀಲೀಲಾ ಇತ್ತೀಚೆಗೆ ಗೋದಾ ದೇವಿಯಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.
ಕರ್ನಾಟಕದ ಬೆಡಗಿ ಶ್ರೀಲೀಲಾ ಸದ್ಯ ತೆಲುಗು ಸಿನಿ ರಂಗದಲ್ಲಿ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಶ್ರೀಲೀಲಾ ನಟಿಸಿದ 'ಗುಂಟೂರು ಖಾರಂ' ಚಿತ್ರದಲ್ಲಿ ಸಖತ್ ಹೆಜ್ಜೆ ಹಾಕಿದ್ದರು. ಇವರ ಡ್ಯಾನ್ಸ್ ಕಂಡು ಮಹೇಶ್ ಬಾಬು ಕೂಡ ಮೆಚ್ಚಿಕೊಂಡಿದ್ದರು.
ಅಮೆರಿಕಾದಲ್ಲಿ ಹುಟ್ಟಿದ ಶ್ರೀಲೀಲಾ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಇವರ ತಾಯಿ ಸ್ವರ್ಣಲತಾ ಸ್ತ್ರೀರೋಗತಜ್ಞೆ.
ನಟಿ ಶ್ರೀಲೀಲಾ ಬಾಲ್ಯದಲ್ಲೇ ಭರತನಾಟ್ಯ ಅಭ್ಯಸಿಸಿದ್ದರು. ಇದೀಗ ಮತ್ತೆ ವೇದಿಕೆ ಮೇಲೆ ಭರತನಾಟ್ಯಕ್ಕೆ ಹೆಜ್ಜೆ ಹಾಕಿದ್ದು, ತಮ್ಮ ಇನ್’ಸ್ಟಾಗ್ರಾಂನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ,
ಇತ್ತೀಚೆಗೆ ಹೈದರಾಬಾದ್’ನಲ್ಲಿ ಸಮತಾ ಕುಂಭ್ ಕಾರ್ಯಕ್ರಮ ನಡೆದಿದ್ದು, ಈ ಸಂಭ್ರಮದಲ್ಲಿ ಶ್ರೀಲೀಲಾ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗೋದಾ ದೇವಿ ವೇಷದಲ್ಲಿ ಶ್ರೀಲೀಲಾ ಭರತನಾಟ್ಯ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಸತತ 10 ನಿಮಿಷಗಳ ಕಾಲ ಶ್ರೀಲೀಲಾ ಹೆಜ್ಜೆ ಹಾಕಿರುವುದು ಅಭಿಮಾನಿಗಳ ಹುಬ್ಬೇರಿಸುವಂತ ಮಾಡಿದೆ.
ಸದ್ಯ ಶ್ರೀಲೀಲಾ ಹೊಸ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಶಿಕ್ಷಣದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.