‘ಕಾಂತಾರ’ ಸಿನಿಮಾ ಖ್ಯಾತಿಯ ಬೆಡಗಿ ಸಪ್ತಮಿ ಗೌಡ ತಮ್ಮ ತಂದೆ ಜೊತೆಗಿರುವ ಒಂದಷ್ಟು ಕ್ಯೂಟ್ ಕ್ಯೂಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಂದೆಗೆ ಸಪ್ತಮಿಗೌಡ ಸಾಥ್ ನೀಡಿದ್ದಾರೆ.
ನಟಿ ಸಪ್ತಮಿಗೌಡರ ತಂದೆ ಎಸ್.ಕೆ.ಉಮೇಶ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ನಟಿಯ ತಾಯಿ ಶಾಂತಾ ಮಾದಯ್ಯ ಸಹ ಜೊತೆಗಿದ್ದರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಎಸ್.ಕೆ.ಉಮೇಶ್ ದೊಡ್ಡಿ ಅವರು ಮೂಲತಃ ರಾಮನಗರ ಜಿಲ್ಲೆಯ ಸೋರೆಕಾಯಿದೊಡ್ಡಿಯವರು.
ಕನಕಪುರದಲ್ಲಿ ವಿದ್ಯಾಭ್ಯಾಸದ ನಂತರ ವಕೀಲರಾಗಿ ವೃತ್ತಿ ಆರಂಭಿದ್ದ ಎಸ್.ಕೆ.ಉಮೇಶ್ ಅವರು ಬಳಿಕ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದರು.
1990-2020ರವರೆಗೆ ಬೆಂಗಳೂರಿನಲ್ಲಿ ಕೆಲಸ ಮಾಡಿದ ಎಸ್.ಕೆ.ಉಮೇಶ್ ಅಪಾರ ಮೆಚ್ಚುಗೆ ಗಳಿಸಿದ್ದಾರೆ. 2015ರಲ್ಲಿ ರಾಷ್ಟ್ರಪತಿ ಪದಕ, 2020ನೇ ಸಾಲಿನ ಕೇಂದ್ರ ಸರ್ಕಾರದ ಸ್ಪೆಷಲ್ ಆಪರೇಷನ್ ಮೆಡಲ್ ಹಾಗೂ ಕೆಂಪೇಗೌಡ ಪ್ರಶಸ್ತಿ ಸೇರಿ ಹತ್ತು-ಹಲವು ಪ್ರಶಸ್ತಿ ಪಡೆದಿದ್ದಾರೆ.