ಕಿಯಾರಾ ಅಡ್ವಾಣಿ ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ಫ್ಯಾಷನ್ ಸೆನ್ಸ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ.
ಸಧ್ಯ ಕಿಯಾರಾ ಫೆಮಿನಾ ಇತ್ತೀಚಿನ ಆವೃತ್ತಿಯ ಮುಖಪುಟಕ್ಕಾಗಿ ಫೋಟೋಶೂಟ್ ಮಾಡಿಸಿದ್ದರು.
ಫೆಮಿನಾ ಮ್ಯಾಗಜೀನ್ ಕವರ್ ಫೋಟೋಸ್‌ನ್ನು ಕಿಯಾರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಟೌನ್ ಬೆಡಗಿಯ ಸೌಂದರ್ಯ ಕಂಡು ಆಕೆಯ ಅಭಿಮಾನಿಗಳು ಬೆರಗಾಗಿದ್ದಾರೆ.
ಕಿಯಾರಾ ಫೋಟೋಶೂಟ್‌ನ ಬಿಟಿಎಸ್ ವೀಡಿಯೊವನ್ನು ಸಹ ಶೇರ್ ಮಾಡಿ, ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ.
ನಟಿ ಕಿಯಾರಾ ಚಿತ್ರಗಳಿಗೆ ಸೂಪರ್, ಹಾಟ್, ಅದ್ಭುತ ಅಂತ ಹಾರ್ಟ್ ಫೈರ್ ಇಮೋಜಿ ಮೂಲಕ ಫ್ಯಾನ್ಸ್ ಕಿಯಾಕ್ಟ್ ಮಾಡುತ್ತಿದ್ದಾರೆ.
ಸಧ್ಯ ಕಿಯಾರಾ ಅಂಗಾಗ ವೈಭವದ ಚಿತ್ರಗಳು ಇಂಟರ್‌ನೆಟ್ ಸಖತ್ ವೈರಲ್ ಆಗಿದ್ದು, ಹೈಪ್ ಕ್ರಿಯೇಟ್ ಮಾಡುತ್ತಿವೆ.
ನಟಿ ಕಿಯಾರಾ ಸಂಜಯ್ ಲೀಲಾ ಬನ್ಸಾಲಿಯವರ ಮುಂಬರುವ ಚಿತ್ರ ಬೈಜು ಬಾವ್ರಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಇದೆ.