ತ್ರಿಶಾ ಕೃಷ್ಣನ್ ಅವರು ಜನನ 4 ಮೇ 1983 ರಂದು ಜನಿಸಿದರು. ನಟಿಗೆ ಈಗ 41 ವರ್ಷ ವಯಸ್ಸು
ಕೃಷ್ಣನ್ ಅಯ್ಯರ್ ಮತ್ತು ಉಮಾ ಅಯ್ಯರ್ ತ್ರಿಶಾ ಪೋಷಕರು. ತಮಿಳು ಪಾಲಕ್ಕಾಡ್ ಅಯ್ಯರ್ ಕುಟುಂಬಕ್ಕೆ ಸೇರಿದವರು.
ತ್ರಿಶಾ 1999 ರಲ್ಲಿ ಮಿಸ್ ಚೆನ್ನೈ ಸ್ಪರ್ಧೆಯನ್ನು ಗೆದ್ದ ನಂತರ, ಮುನ್ನೆಲೆಗೆ ಬಂದರು.
ಹೆಚ್ಚಾಗಿ ತ್ರಿಶಾ ತಮಿಳು ಮತ್ತು ಹಿಂದಿ, ತೆಲುಗು ಚಲನಚಿತ್ರಗಳಲ್ಲಿ ನಟಿಸುತ್ತಿದ್ದು, ಸಾಕಷ್ಟು ಪ್ಯಾನ್ಸ್ ಪಾಲೋಯಿಂಗ್ ಹೊಂದಿದ್ದಾರೆ.
ತ್ರಿಶಾ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ʼದಕ್ಷಿಣ ರಾಣಿʼ ಎಂದು ಕರೆಯುತ್ತಾರೆ.
ಟೈಮ್ಸ್ ಆಫ್ ಇಂಡಿಯಾದಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಗ್ರ ನಟಿಯರಲ್ಲಿ ಸ್ಥಾನ ಪಡೆದಿದ್ದಾರೆ ತ್ರಿಶಾ.
ತ್ರಿಶಾ ನಟನೆಯ ಪೊನ್ನಿಯಿನ್ ಸೆಲ್ವನ್: 1 ಮತ್ತು ಪೊನ್ನಿಯಿನ್ ಸೆಲ್ವನ್: 2 ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದವು.
ತ್ರಿಶಾ ಮಿಸ್ ಇಂಡಿಯಾ 2001 ಸ್ಪರ್ಧೆಯ "ಬ್ಯೂಟಿಫುಲ್ ಸ್ಮೈಲ್" ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.
ಧನುಷ್ಯ ಜೊತೆ ತ್ರಿಶಾ ಹೆಸರು ಕೇಳಿ ಬಂದಿತ್ತು. ಇಬ್ಬರು ಮದುವೆಯಾಗುವುದಾಗಿ ಸುದ್ದಿಯಾಗಿತ್ತು.
ತಲಾ ವಿಜಯ್ ಜೊತೆ ತ್ರಿಶಾ ಡೇಟಿಂಗ್ ಮಾಡುತ್ತಿದ್ದ ವಿಚಾರ ಸಖತ್ ವೈರಲ್ ಆಗಿತ್ತು. ಆದ್ರೆ ಈ ಕುರಿತು ಜೋಡಿ ಸ್ಪಷ್ಟತೆ ನೀಡಿಲ್ಲ.