ಮಹಾನಟಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದು, ಆ ಬಳಿಕ ಕನ್ನಡದ ಅನೇಕ ಇತರ ಕಾರ್ಯಕ್ರಮಗಳಲ್ಲಿ ಮಿಂಚುತ್ತಿರುವ ಪ್ರತಿಭೆ ಗಗನಾ ಭಾರಿ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಮಹಾನಟಿ ಮತ್ತು ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋಗಳಲ್ಲಿ ಸರ್ಧಿಸಿದ್ದಾರೆ ಗಗನಾ.
ಮೂಲತಃ ಚಿತ್ರದುರ್ಗದವರಾದ ಗಗನಾ, ಓದಿದ್ದೆಲ್ಲಾ ಬಳ್ಳಾರಿಯಲ್ಲಿ.
ಶಿಕ್ಷಣ ಮುಗಿಸಿದ ಬಳಿಕ ಐಟಿ ಕಂಪನಿಯಲ್ಲಿ ದುಡಿಯುತ್ತಿದ್ದ ಗಗನಾ, ನಟನೆ ಮೇಲಿನ ಆಸಕ್ತಿಯಿಂದ ಮಹಾನಟಿ ಆಡೀಷನ್ ನೀಡಿದ್ದರು.
ಆಡಿಷನ್‌ಗೆ ಹೋಗುತ್ತಿದ್ದ ಬಗ್ಗೆ ಅಪ್ಪ ಅಮ್ಮನಿಗೂ ಹೇಳಿರಲಿಲ್ಲವಂತೆ ಗಗನಾ. ಏಕೆಂದರೆ ಅವರು ವಿಲೇಜ್ ಪೇರೆಂಟ್ಸ್, ತುಂಬಾ ಭಯ ಇದೆ ಅವರಿಗೆ. ಮೆಗಾ ಅಡಿಷನ್‌ಗೆ ಹೋಗುವಾಗ ಹೇಳಿದ್ದೆ ಎಂದು ಸ್ವತಃ ಅವರೇ ಹೇಳಿದ್ದಾರೆ.
ಇನ್ನು ರಿಯಾಲಿಟಿ ಶೋಗೆ ಬಂದಾಗ ಗಗನಾ ಅವರಿಗೆ ಹತ್ತು ಸಾವಿರ ರುಪಾಯಿ ಸಂಭಾವನೆ ಕೊಟ್ಟಿದ್ದರು ಎಂದು ಬಹಿರಂಗಪಡಿಸಿದ್ದಾರೆ.