Meenakshi Chaudhary

ಮೀನಾಕ್ಷಿ ಚೌಧರಿ.. ನಾಯಕಿ, ರೂಪದರ್ಶಿ, ಸೌಂದರ್ಯ ಸ್ಪರ್ಧೆಯ ಟೈಟಲ್ ಹೋಲ್ಡರ್. ಸಧ್ಯ ತೆಲುಗು ತಮಿಳು ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.

Jul 06,2024

Meenakshi Chaudhary achievements

ಮೀನಾಕ್ಷಿ ಫೆಮಿನಾ ಮಿಸ್ ಇಂಡಿಯಾ 2018 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಪ್ರತಿನಿಧಿಸಿದರು. ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಇಂಟರ್ನ್ಯಾಷನಲ್ 2018 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸಿ, 1ನೇ ರನ್ನರ್ ಅಪ್ ಆಗಿದ್ದರು.

Meenakshi Chaudhary family

ಮೀನಾಕ್ಷಿ ಚೌಧರಿ ಅವರು 1 ಫೆಬ್ರವರಿ 1997 ರಂದು ಹರಿಯಾಣದ ಪಂಚಕುಲದಲ್ಲಿ ಹುಟ್ಟಿ ಬೆಳೆದರು. ಈ ಅಜ್ಜಿಯ ತಂದೆ ಬಿ.ಆರ್.ಚೌಧರಿ ಅವರು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು.

Meenakshi Chaudhary education

ನಟಿ ಚಂಡೀಗಢದ ಸೇಂಟ್ ಸೋಲ್ಜರ್ ಇಂಟರ್‌ನ್ಯಾಶನಲ್ ಕಾನ್ವೆಂಟ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ. ಪಂಜಾಬ್‌ನ ಡೇರಾ ಬಸ್ಸಿಯ ನ್ಯಾಷನಲ್ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ದಂತ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

Miss Femina

ಈ ಚೆಲುವೆ ಶಾಲಾ ದಿನಗಳಲ್ಲಿ ರಾಜ್ಯ ಮಟ್ಟದ ಈಜುಗಾರ್ತಿ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಯಶಸ್ಸು ಸಾಧಿಸಿದ್ದಾಳೆ. ಫೆಮಿನಾ ಮಿಸ್ ಇಂಡಿಯಾ 2018 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಇಂಟರ್ನ್ಯಾಷನಲ್ 2018 ಕಿರೀಟವನ್ನು ಪಡೆದರು.

Meenakshi Chaudhary movies

2021 ರಲ್ಲಿ, ಅವರು ತೆಲುಗು ಚಲನಚಿತ್ರ ಇಚ್ತಾ ವಾಹನಮುಲು ಅತಿರಡು ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಅವರು ಕಿಲಾಡಿ ಮತ್ತು ಹಿಟ್ ಕೇಸ್ 2 ಚಿತ್ರಗಳಲ್ಲಿ ನಟಿಸಿದರು. ಸದ್ಯ ವಿಎಸ್ 10, ಲಕ್ಕಿ ಭಾಸ್ಕರ್ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Meenakshi Chaudhary photos

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ನಟಿ, ಆಗಾಗ ಫೋಟೋಶೂಟ್‌ ಮಾಡಿಸುತ್ತಿರುತ್ತಾರೆ. ಸಧ್ಯ ಮೀನಾಕ್ಷಿ ಹಂಚಿಕೊಂಡಿರುವ ಚಿತ್ರಗಳು, ಪಡ್ಡೆ ಹುಡುಗರ ಮನ ಗೆಲ್ಲುತ್ತಿವೆ..

VIEW ALL

Read Next Story