ಜೊತೆ ಜೊತೆಯಲಿ ಸಿರೀಯಲ್ ಮೂಲಕ ಕನ್ನಡಿಗರ ಮನಗೆದ್ದವರು ಮೇಘಾ ಶೆಟ್ಟಿ.
ಸದ್ಯ ನಟಿ ಮೇಘಾ ಶೆಟ್ಟಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ.
‘ಜೊತೆ ಜೊತೆಯಲಿ’ ಸಿರೀಯಲ್‌ನಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.
ಈ ಬಾರಿ ಗುಲಾಬಿ ಹೂವಿನ ಡಿಸೈನ್ ಇರುವ ಬಿಳಿ ಬಣ್ಣದ ಬಟ್ಟೆ ಧರಿಸಿ ಮೇಘಾ ಮಿಂಚಿದ್ದಾರೆ.
ಮೇಘಾ ಶೆಟ್ಟಿ ಅವರ ಈ ಫೋಟೋಶೂಟ್ ನೋಡುಗರ ಮನಸೂರೆಗೊಳಿಸುವಂತಿದೆ.
ಮೇಘಾ ಶೆಟ್ಟಿ ಅವರ ಈ ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎಲ್ಲರೂ ‘ಬಿಳಿ ಗುಲಾಬಿ’ ಎಂದೇ ಅವರನ್ನು ಹೊಗಳುತ್ತಿದ್ದಾರೆ.