Mrunal Thakur: ಸೀರೆಯುಟ್ಟು ಮಲ್ಲಿಗೆ ಮುಡಿದ ಸೀತಾ ಮಹಾಲಕ್ಷ್ಮೀ.. ಪೋಟೋಸ್ ವೈರಲ್
ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್.
ಆ ಒಂದು ಸಿನಿಮಾದಿಂದ ನಟಿಗೆ ಸದ್ಯ ತೆಲುಗಿನಲ್ಲಿ ಅವಕಾಶಗಳು ಬರುತ್ತಿವೆ
ಮೃಣಾಲ್ ಪ್ರಸ್ತುತ ನಾನಿ ನಾಯಕನಾಗಿರುವ ಹೈ ನನ್ನ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸಾಲು ಸಾಲು ಚಿತ್ರಗಳಿಂದ ಉತ್ತಮ ಫಾರ್ಮ್ ನಲ್ಲಿರುವ ಮೃಣಾಲ್ ಗೆ ಕ್ರೇಜಿ ಆಫರ್ ಬಂದಿದೆಯಂತೆ.
ತಮಿಳು ಸಿನಿಮಾದಲ್ಲಿ ನಾಯಕ ಶಿವ ಕಾರ್ತಿಕೇಯನ್ ಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮೃಣಾಲ್ ತೆಲುಗು ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ದೇವರಕೊಂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ.
ವಿಜಯ್ ಜೊತೆಗಿನ ಈ ಸಿನಿಮಾಗೆ ಈ ಮರಾಠಿ ಚೆಲುವೆ ಹೆಚ್ಚು ಸಂಭಾವನೆ ಪಡೆದಿದದಾರೆ ಎನ್ನಲಾಗುತ್ತಿದೆ..