ತುಂಡು ಬಟ್ಟೆ ತೊಟ್ಟು ಪಡ್ಡೆ ಹುಡುಗರಿಗೆ ಶಾಕ್ ನೀಡುತ್ತಿದ್ದ ಸುಂದರಿ ಇದೀಗ ಸೀರೆಯಲ್ಲಿ ಕಾಣಿಸಿಕೊಂಡು ಯುವಕರ ಮನ ಗೆದ್ದಿದ್ದಾಳೆ.
ಶಿವಣ್ಣ ನಟನೆಯ ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಸಭಾ ಪಟಾಕಿ ಹುಡುಗಿಯಂತಲೇ ಫೇಮಸ್ ಆದರು.
ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ 'ನಾನು ದೋಚುಕುಂಡುವತೆ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು.
ತನ್ನ ವಿಶಿಷ್ಟ ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಟಾಲಿವುಡ್ ಬೆಳ್ಳಿತೆರೆಯ ಮೇಲೆ ಕನ್ನಡತಿ ನಭಾ ಮೋಡಿ ಮಾಡಿದರು.
ನಭಾ ನಟೇಶ್ 'ಐಸ್ಮಾರ್ಟ್ ಶಂಕರ್' ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಿಟ್ಟಿಸಿಕೊಂಡರು. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ ಸೂಪರ್ ಹಿಟ್ ಆಯಿತು.
ಡಿಸ್ಕೋ ರಾಜಾ, ಸೋಲೋ ಬ್ರತುಕೆ ಸೋ ಬೆಟರ್, ಹೀಗೆ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸುವ ಮೂಲಕ ನಭಾ ಕ್ರೇಜಿ ಹೀರೋಯಿನ್ ಆಗಿ ಮಿಂಚಿದರು.
ತೆಲುಗಿನಲ್ಲಿ ಅವಕಾಶಗಳು ವಿರಳವಾಗಿ ಬರುತ್ತಿರುವುದರಿಂದ ನಭಾ ಸಾಮಾಜಿಕ ಮಾಧ್ಯಮದಲ್ಲಿ ಸೌಂದರ್ಯ ಸ್ಪರ್ಧೆ ಪ್ರಾರಂಭಿಸಿದಂತಿದ್ದು, ಆಗಾಗ ಫೊಟೋಶೂಟ್ ಮೂಲಕ ಟ್ರೇಂಡ್ ಆಗುತ್ತಿದ್ದಾರೆ.