ದೀಪಿಕಾ ದಾಸ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.
ಇವರು ಕಿರುತೆರೆಯಲ್ಲೂ ಕೂಡ ನಟಿಸಿದ್ದಾರೆ. ಇವರು ರಾಕಿಂಗ್ ಸ್ಟಾರ್ ಯಶ್ ಸಹೋದರಿ 1993 ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಜನಿಸಿದರು.
2014 ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ `ದೂಧಸಾಗರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು.
2016 ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ `ನಾಗಿಣಿ' ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು.
ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು.