ನೇಹಾ ಶೆಟ್ಟಿ ಮುಂಗಾರು ಮಳೆ 2 ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.
ಸಧ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮೆಹಬೂಬ ಸಿನಿಮಾದ ಮೂಲಕ ನೇಹಾ ತೆಲುಗು ಸಿನಿರಂಗಕ್ಕೆ ಕಾಲಿಟ್ಟರು.
ಡಿಜೆ ಟಿಲ್ಲು ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ನೇಹಾ ಬಹು ಬೇಡಿಕೆ ನಟಿಯಾಗಿ ಹೊರಹೊಮ್ಮಿದರು.
ಸಧ್ಯ ನೇಹಾ ನಟನೆಯ ರೂಲ್ಸ್ ರಂಜನ್ ಸಿನಿಮಾ ಚಿತ್ರಮಂದಿರಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ರೂಲ್ಸ್ ರಂಜನ್ ಸಿನಿಮಾ ‘ಸಮ್ಮೋಹನುಡಾ’ ಹಾಡು ದೊಡ್ಡ ಹಿಟ್ ಆಗಿದೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಾಳೆ.
ಸಧ್ಯ ಹಳದಿ ಸೀರೆಯುಟ್ಟು ಕ್ಯೂಟ್ ಲುಕ್‌ನಲ್ಲಿ ಕಾಣಿಸಿ, ಪ್ಯಾನ್ಸ್ ಬೆರಗಾಗುವಂತೆ ಮಾಡಿದ್ದಾರೆ.