ಬೆಂಗಳೂರಿನಲ್ಲಿ ಜನಿಸಿದ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದ ಯುವನಟಿ.
ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಿಶ್ವಿಕಾರ ಮೊದಲ ಚಿತ್ರ 'ವಾಸು ನಾನ್ ಪಕ್ಕಾ ಕಮರ್ಷಿಯಲ್'.
ವಿಶೇಷವೆಂದರೆ ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು.
ಇದೀಗ ಈ ಕ್ಯೂಟ್ ನಟಿ ಸೀರೆಯಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಟಿಯ ಪೋಟೋಗಳನ್ನು ನೋಡಿದ ನೆಟ್ಟಿಗರು ನಿನ್ನಂದಕೆ ಸರಿಸಾಟಿ ಯಾರಿಲ್ಲ, ಅಪ್ಪಟ ಕನ್ನಡ ಚೆಲುವೆ ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ನಟಿ ಯಾವಗಲೂ ತಮ್ಮ ಟ್ರೇಡಿಷನಲ್ ಲುಕ್‌ನಿಂದಲೇ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದಾರೆ.