ಜ್ಯೋತಿಕಾ 25 ವರ್ಷಗಳ ನಂತರ ಹಿಂದಿ ಚಿತ್ರಗಳಿಗೆ ಮರಳುತ್ತಿದ್ದಾರೆ ಮತ್ತು ಮೊದಲ ಬಾರಿಗೆ ಅಜಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. (ಚಿತ್ರ ಕೃಪೆ- ಜ್ಯೋತಿಕಾ ಫೇಸ್ಬುಕ್)
ವಿಕಾಸ್ ಬಹ್ಲ್ ನಿರ್ದೇಶನದ ಮುಂಬರುವ ಸೂಪರ್‌ನ್ಯಾಚುರಲ್ ಥ್ರಿಲ್ಲರ್‌ನಲ್ಲಿ ನಟಿ ಜ್ಯೋತಿಕಾ ಸರವಣನ್ ಅಜಯ್ ದೇವಗನ್, ಆರ್ ಮಾಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. (ಚಿತ್ರ ಕೃಪೆ- ಜ್ಯೋತಿಕಾ ಫೇಸ್ಬುಕ್)
ಜೂನ್ ತಿಂಗಳಿನಲ್ಲಿ ಈ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದೆ ಮತ್ತು ಮುಂಬೈ, ಮಸ್ಸೂರಿ ಮತ್ತು ಲಂಡನ್‌ನಲ್ಲಿ ವ್ಯಾಪಕವಾಗಿ ಇದರ ಚಿತ್ರೀಕರಣ ನಡೆಯಲಿದೆ. (ಚಿತ್ರ ಕೃಪೆ- ಜ್ಯೋತಿಕಾ ಫೇಸ್ಬುಕ್)
ಅಜಯ್ ದೇವಗನ್ ಎಫ್‌ಫಿಲ್ಮ್ ಮತ್ತು ಪನೋರಮಾ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಅಜಯ್ ದೇವಗನ್, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. (ಚಿತ್ರ ಕೃಪೆ- ಜ್ಯೋತಿಕಾ ಫೇಸ್ಬುಕ್)
ಅಕ್ಷಯ್ ಖನ್ನಾ ಅಭಿನಯದ ಚಿತ್ರ 'ಡೋಲಿ ಸಜಾ ಕೆ ರಖನಾ' ಚಿತ್ರದ ಮೂಲಕ ಜ್ಯೋತಿಕಾ ತನ್ನ ವೃತ್ತಿ ಜೀವನ ಆರಂಭಿಸಿದ್ದಳು. ಜ್ಯೋತಿಕಾ ನಟ ಸೂರ್ಯ ಅವರ ಪತ್ನಿ. (ಚಿತ್ರ ಕೃಪೆ- ಜ್ಯೋತಿಕಾ ಫೇಸ್ಬುಕ್)