ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಚಿತ್ರರಂಗದ ಅನೇಕ ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
50 ವರ್ಷಗಳಿಂದ ತೆಲುಗಿನ ಟಾಪ್ ನಟನಾಗಿ ಮೆರೆಯುತ್ತಿರುವ ನಂದಮೂರಿ ಬಾಲಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಮಿಳು ಚಿತ್ರನಟ ಅಜಿತ್ ಕುಮಾರ್ 3 ದಶಕಗಳಿಂದ ಸಿನಿರಂಗದಲ್ಲಿದ್ದಾರೆ. ಇದೀಗ ಅಜಿತ್ ಕುಮಾರ್ ಅವರಿಗೆ ಕೇಂದ್ರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ.
ಕನ್ನಡ ಸೇರಿದಂತೆ ದಕ್ಷಿಣ ಚಿತ್ರರಂಗದಲ್ಲಿ ನಾಯಕಿಯಾಗಿ ರಂಜಿಸಿರುವ ಶೋಭಾನಾ ಅವರಿಗೆ ಕೇಂದ್ರ ಪದ್ಮಭೂಷಣ ಘೋಷಣೆ ಮಾಡಿದೆ. ಇವರು ಈ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಕೇಂದ್ರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವಿಶೇಷ ಮನ್ನಣೆ ಗಳಿಸಿದ್ದಾರೆ.
ಹಿಂದಿ ಚಿತ್ರರಂಗದ ಸ್ಟಾರ್ ನಟ ಶೇಖರ್ ಕಪೂರ್ ಅವರಿಗೆ ಕೇಂದ್ರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಖ್ಯಾತ ಗಾಯಕ ಅರ್ಜಿತ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಅರ್ಜಿತ್ ತಮ್ಮ ಸುಮಧುರ ಕಂಟದಿಂದ ಈಗಾಗಲೇ ದೇಶದ ಜನರ ಮನ ಗೆದ್ದಿದ್ದಾರೆ.