ಅಮೆರಿಕಾದಲ್ಲಿ ಪದವಿ ಪಡೆದ ಪುನೀತ್‌ ರಾಜ್‌ಕುಮಾರ್‌ ಹಿರಿಮಗಳು ಧೃತಿ ನಿಜವಾದ ವಯಸ್ಸೆಷ್ಟು?

Bhavishya Shetty
May 16,2025

ಪದವಿ ಪೂರ್ಣ

ಪವರ್‌ಸ್ಟಾರ್‌ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹಿರಿಮಗಳು ಧೃತಿ ಪುನೀತ್‌ ರಾಜ್‌ಕುಮಾರ್‌ ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯ ಪ್ರೈವೇಟ್‌ ಆರ್ಟ್ಸ್‌ ಮತ್ತು ಡಿಸೈನಿಂಗ್‌ ಕಾಲೇಜು ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.

ಕುಟುಂಬ

ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ದಂಪತಿಗೆ ಇಬ್ಬರು ಮಕ್ಕಳು ಧೃತಿ ಮತ್ತು ವಂದಿತಾ.

ಓದಿದ್ದೇನು?

ಧೃತಿ ನ್ಯೂಯಾರ್ಕ್‌ನ ʻಪಾರ್ಸನ್‌ ಸ್ಕೂಲ್‌ ಆಫ್‌ ಡಿಸೈನ್ʼ (Parsons School of Design) ಕಾಲೇಜಿನಲ್ಲಿ ಡಿಸೈನಿಂಗ್‌ ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಯಾವ ಕಾಲೇಜು?

1896ರಲ್ಲಿ ನಿರ್ಮಾಣವಾದ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಕಾಲೇಜಿಗೆ 129 ವರ್ಷಗಳ ಇತಿಹಾಸವಿದೆ. ಇದು ನ್ಯೂಯಾರ್ಕ್‌ನ ಅತ್ಯಂತ ಹಳೆಯ ಕಲೆ ಮತ್ತು ವಿನ್ಯಾಸ ಶಾಲೆಗಳಲ್ಲಿ ಒಂದಾಗಿದೆ.

ಫೋಟೋ

ಈ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ವಿದ್ಯಾಭ್ಯಾಸ ಪೂರ್ಣಗಿಳಿಸಿದ್ದು, ಕಾಲೇಜು ಮುಂಭಾಗದಲ್ಲಿ ನಿಂತ ಎರಡು ಫೋಟೋಗಳನ್ನು ಶೇರ್‌ ಮಾಡಿದ್ದಾರೆ

ಕಾಲೇಜು

2022ರಲ್ಲಿ, ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಯುನೈಟೆಡ್ ಸ್ಟೇಟ್ಸ್‌ನ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಉನ್ನತ ಕಲೆ ಮತ್ತು ವಿನ್ಯಾಸ ಶಾಲೆಯಾಗಿ ಶ್ರೇಯಾಂಕವನ್ನು ಪಡೆದಿದೆ.

ವಯಸ್ಸು

BREEZEMASTI ಎಂಬ ವೆಬ್‌ಸೈಟ್‌ ಪ್ರಕಾರ, ಧೃತಿ ಪುನೀತ್‌ ರಾಜ್‌ಕುಮಾರ್‌ ಅವರ ವಯಸ್ಸು 23 ವರ್ಷ. 5 ಅಡಿ 5 ಇಂಚು ಎತ್ತರವಿರುವ ಧೃತಿ, 58 ಕೆಜಿ ತೂಕ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

VIEW ALL

Read Next Story