ಪಿ.ವಿ ಗಂಗಾಧರನ್ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ
ನಿರ್ಮಾಪಕ ಪಿ.ವಿ ಗಂಗಾಧರನ್ ಇಂದು ನಿಧನರಾಗಿದ್ದಾರೆ.
ಗಂಗಾಧರನ್ ಅವರಿಗೆ ಸಿನಿಮಾ ಮೇಲಿನ ಆಸಕ್ತಿ ಹೆಚ್ಚಿತ್ತು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವ ಸಂದಿವೆ.
ಪಿ.ವಿ ಗಂಗಾಧರನ್ ನಿರ್ಮಾಣದ ಕಣಕ್ಕಿನವು 1997 ರಲ್ಲಿ ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರತಿಷ್ಟಿತ ನರ್ಗೀಸ್ ದತ್ ಪ್ರಶಸ್ತಿಯನ್ನು ಪಡೆದಿದೆ.
2000 ರಲ್ಲಿ ಶಾಂತಮ್ ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಅತ್ಯುತ್ತಮ ಸಿನಿಮಾ ಆಗಿ ಆಯ್ಕೆ ಆಯ್ತು.
ಒರು ವಡಕ್ಕನ್ ವೀರಗಾಥ (1986), ಕಣಕ್ಕಿನವು (1997), ವೀಂದುಮ್ ಚಿಲ ವೀಟ್ಟುಕಾರ್ಯಂಗಲ್ (1999), ಅಚ್ಚುವಿಂತೆ ಅಮ್ಮ (2005) ಮತ್ತು ನೋಟ್ ಬುಕ್ (2006) ರಾಜ್ಯ ಪ್ರಶಸ್ತಿ ಗೆದ್ದುಕೊಂಡಿವೆ.
ಗಂಗಾಧರನ್ ಅವರು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟದಲ್ಲಿ ಉಪಾಧ್ಯಕ್ಷರಾಗಿದ್ದರು.
ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಅವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.