ಸ್ಯಾಂಡಲ್‌ವುಡ್ ಕ್ವೀನ್ ರಚಿತಾ ರಾಮ್ ಸೀರೆಯುಟ್ರೆ ತುಂಬಾ ಸ್ಪೆಷಲ್ ಆಗಿ ಕಾಣಿಸಿಕೊಳ್ಳುತ್ತಾರೆ.
ಸೀರೆಲಿ ಹುಡುಗಿನ ನೋಡಲೇ ಬಾರದು ಎನ್ನುವ ಹಾಡು ರಚ್ಚುಗೆ ಸೂಪರ್ ಆಗಿ ಸೂಟ್ ಆಗುತ್ತೆ.
ಸೋಷಿಯಲ್ ಮಿಡಿಯಾದಲ್ಲಿ ಕಪ್ಪು ಸೀರೆಯುಟ್ಟ ರಚಿತಾ ಫೋಟೋ ಸಖತ್ ವೈರಲ್ ಆಗಿವೆ.
ರಚ್ಚು ಬ್ಯೂಟಿ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಸೂಪರ್.. ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ಸೀರೆಯಲ್ಲಿ ಬೆರಗು ಮೂಡಿಸುವಂತಿರುವ ಬುಲ್ ಬುಲ್ ಬೆಡಗಿ ಫೋಟೋಸ್ ಪಡ್ಡೆ ಹೈಕ್ಳಿಗೆ ಹುಚ್ಚು ಹಿಡಿಸುತ್ತಿವೆ.
ಸಾಮಾನ್ಯವಾಗಿ ರಚಿತಾ ರಾಮ್ ಫೋಟೋ ಶೂಟ್ ಅದು-ಇದು ಅಂತ ಹೆಚ್ಚು ತಲೆಕೆಡಸಿಕೊಳ್ಳೋದಿಲ್ಲ. ತಮ್ಮ ಕೆಲಸದಲ್ಲಿಯೇ ಬ್ಯುಸಿ ಆಗಿರುತ್ತಾರೆ.
ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಫೋಟೋಸ್ ಹಂಚಿಕೊಂಡಿದ್ದಾರೆ.
ಸಧ್ಯ ರಚ್ಚು ಸಂಜು ವೆಡ್ಸ್ ಗೀತಾ-2 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.
ಲವ್ ಮೀ ಆರ್ ಹೇಟ್ ಮೀ, ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ.