ಮೊದಲ ಮಗುವಿಗೆ ಗರ್ಭಿಣಿಯಾಗಿರುವ ಕನ್ನಡ ನಟಿ ರಾಧಿಕಾ ರಾವ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ರಾಧಿಕಾ ರಾವ್ ಇತ್ತೀಚೆಗೆ ತನ್ನ ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ.
ಸಿನಿಮಾ ತಾರೆಯರು ಹಾಗೂ ಕಿರುತೆರೆ ನಟಿಯರು ಪ್ರೆಗ್ನೆನ್ಸಿಯ ಫೋಟೋಶೂಟ್ ಮಾಡಿಸಿಕೊಳ್ಳುವುದು ಕಾಮನ್ ಆಗಿದೆ.
ಆದರೆ, ರಾಧಿಕಾ ರಾವ್ ಪಕ್ಕಾ ದೇಸಿ ಲುಕ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ನಟಿ ಬೇಬಿ ಬಂಪನ್ನು ತೋರಿಸಿದ್ದಾರೆ.
ಚಿನ್ನದ ಝರಿ ಬಾರ್ಡರ್‌ನ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ್ದಾರೆ.