ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.`ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ.
ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೆತ್ರಕ್ಕೆ ಇಳಿದ ಇವರು ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು.
ನಂತರ `ಕಿರಿಕ್ ಪಾರ್ಟಿ' ಚಿತ್ರಕ್ಕೆ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಈ ಚಿತ್ರದಲ್ಲಿನ ಸಾನ್ವಿ ಪಾತ್ರ ಇವರಿಗೆ ತುಂಬಾ ಪ್ರಸಿದ್ಧಿ ತಂದು ಕೊಟ್ಟಿತು.
2017 ರಲ್ಲಿ ತಮ್ಮ `ಕಿರಿಕ್ ಪಾರ್ಟಿ' ಚಿತ್ರದ ಜೋಡಿ ರಕ್ಷಿತ್ ಶೆಟ್ಟಿಯೊಂದಿಗೆ ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮುಂದೆ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಬೇರ್ಪಟ್ಟಿತು.
ಕನ್ನಡದಲ್ಲಿ `ಅಂಜನಿಪುತ್ರ',`ಚಮಕ್',`ಯಜಮಾನ' ಚಿತ್ರಗಳಲ್ಲಿ ನಟಿಸಿದ ಇವರು ತೆಲುಗು ಚಿತ್ರರಂಗದಲ್ಲಿ `ಗೀತ ಗೋವಿಂದಂ',`ಚಲೋ',`ದೇವದಾಸ್' ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ.