ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ದುಬೈ ಪ್ರವಾಸದಲ್ಲಿದ್ದು, ಅಲ್ಲಿಯೂ ಸಹ ಸೀರೆಯುಟ್ಟು ಟ್ರೆಡಿಷನ್ ಲುಕ್ನಲ್ಲಿ ಮಿಂಚುತ್ತಿದ್ದಾರೆ.
ಕ್ರೀಮ್ ಕಲರ್ ಸೀರೆ ಜೊತೆ ಮಿರರ್ ವರ್ಕ್ ಬ್ಲೌಸ್ ಧರಿಸಿರುವ ರಶ್ಮಿಕಾ ಸಖತ್ತಾಗಿ ಕಾಣಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ದುಬೈನಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಫೋಟೋಸ್ಗೆ ಅವರ ಅಭಿಮಾನಿಗಳು ರೆಡ್ ಹಾರ್ಟ್, ಫೈರ್ ಇಮೋಜಿ ಮೂಲಕ ಲವ್ ತೋರುತ್ತಿದ್ದಾರೆ.
ರಶ್ಮಿಕಾ ಮಂದಣ್ಣ 2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಚಲೋ ಸಿನಿಮಾ ಮೂಲಕ ರಶ್ಮಿಕಾ ತೆಲುಗು ಸಿನಿರಂಗವನ್ನು ಪ್ರವೇಶಿಸಿ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದರು.
ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ, ರಶ್ಮಿಕಾ ಜೋಡಿ ಸಿನಿರಸಿಕರಿಗೆ ತುಂಬಾ ಇಷ್ಟವಾಯಿತು.
ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಅಲ್ಲು ಅರ್ಜುನ್ ನಟನೆಯೆ ಪುಷ್ಟಾ ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಪ್ಯಾನ್ ಇಂಡಿಯಾ ಲೆವೆಲ್ಗೆ ಮಿಂಚಿದರು.
ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ಸಹ ನಟಿಸಿ ರಶ್ಮಿಕಾ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಗಳಿಸಿದರು.