ಸಿದ್ಧಾರ್ಥ್ ಅಭಿನಯದ ಅನಗನ ಒಕ ಧೀರುಡು ಎಂಬ ಚಿತ್ರದ ಮೂಲಕ ಶೃತಿ ಸಿನಿರಂಗಕ್ಕೆ ಕಾಲಿಟ್ಟರು.
ದಿಗ್ಗಜ ನಟ ಕಮಲ್ ಹಾಸನ್ ಮಗಳಾಗಿದ್ದರೂ ಸಹ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾಳೆ.
ಶೃತಿ ಇತ್ತೀಚಿಗಷ್ಟೇ ಬಿಡುಗಡೆಯಾದ ಸಲಾರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾಳೆ.
ನಿನ್ನೆ ತೆರೆಕಂಡ ಸಲಾರ್ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ಶೃತಿ ಪಾತ್ರ ಏನು ಅಂತ ಕ್ಯೂರಿಯಾಸಿಟಿ ಹುಟ್ಟಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿ ಆಗಾಗ ಹೊಸ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾಳೆ.
ಸದ್ಯ, ಕಪ್ಪು ಮಾಡರ್ನ್ ಡ್ರೆಸ್ ಮಿಂಚಿರುವ ಶ್ರುತಿ ಹಾಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಗೋಲ್ಡನ್ ಲೆಗ್ ಗರ್ಲ್ ಎಂದು ಗುರುತಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ವಾಲ್ತೇರು ವೀರಯ್ಯ, ವೀರಸಿಂಹ ರೆಡ್ಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ನಟನೆ.. ಹಾಡು, ಕುಣಿತ ಹೀಗೆ ಎಲ್ಲದರಲ್ಲೂ ಶ್ರುತಿ ಹಾಸನ್ ಅಭಿಮಾನಿಗಳಿಗೆ ಇಷ್ಟವಾಗ್ತಾರೆ.