ದೊಡ್ಡ ಬ್ರೇಕ್‌ನ ನಂತರ ಮತ್ತೆ ರೀ ಎಂಟ್ರಿ ಕೊಟ್ಟ ಸಮಂತಾ..!

Zee Kannada News Desk
Jul 01,2024


ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸಿನಿಮಾದಿಂದ ದೂರ ಇದ್ದ ಸಮಂತಾ ಇದೀಗ ಸಿನಿಮಾಗೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.

ಮಯೋಸಿಟಿಸ್‌

ಮಯೋಸಿಟಿಸ್‌ ನಿಂದ ಬಳಲುತ್ತಿರುವ ಸ್ಯಾಮ್ ಅದರಿಂದ ಚೇತರಿಸಿಕೊಳ್ಳಲು ಒಂದು ವರ್ಷ ಸಿನಿಮಾಗಳಿಂದ ಗ್ಯಾಪ್‌ ಪಡೆದುಕೊಂಡಿದ್ದರು.

ಸ್ಯಾಮ್‌

ಸಿನಿಮಾದಿಂದ ದೂರವಿದ್ದ ಸ್ಯಾಮ್‌ ಅನ್ನು ಅಭಿಮಾನಗಳು ಸಿನಿಮಾ ಯಾವಾಗ ವಾಪಸ್‌ ಬುತ್ತೀರಾ ಅಂತಾ ಕೇಳುತ್ತಲೇ ಇದ್ದರು. ಇದೀಗ ಸ್ಯಾಮ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಖುಷಿ

ತೆಲುಗಿನ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಜೊತೆ ಸಮಂತಾ ಕೊನೆಯದಾಗಿ ನಟಿಸಿದ್ದು, ಖುಷಿ ಇವರ ಕೊನೆಯ ಸಿನಿಮಾ ಆಗಿತ್ತು.

ಅನಾರೋಗ್ಯ

ಅನಾರೋಗ್ಯದ ಕಾರಣ ಕೊಂಚ ಬಿಡುವು ಮಾಡಿಕೊಂಡಿದ್ದ ಸ್ಯಾಮ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ

ಬಾಲಿವುಡ್‌

ಇತ್ತೀಚೆಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಮಂತಾ ಶೀಘ್ರದಲ್ಲೇ ಮತ್ತೊಂದು ಹೊಸ ಪ್ರಾಜೆಕ್ಟ್‌ ಒಂದನ್ನು ಒಪ್ಪಿಕೊಂಡಿದ್ದಾರೆ.

ಆದಿತ್ಯ ರಾಯ್ ಕಪೂರ್

ಆದಿತ್ಯ ರಾಯ್ ಕಪೂರ್ ಜೊತೆ ವೆಬ್ ಸೀರೀಸ್ ಮಾಡಲು ಸಮಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ರಕ್ತ ಬೀಜ್'

ಇದಕ್ಕೆ 'ರಕ್ತ ಬೀಜ್' ಎಂಬ ಶೀರ್ಷಿಕೆ ನೀಡಲಾಗಿದ್ದು ಫುಲ್‌ ಆಕ್ಷನ್‌ ಫಾರ್ಮ್‌ನಲ್ಲಿ ಸ್ಯಾಮ್‌ ಕಾಣಿಸಿಕೊಳ್ಳಲಿದ್ದಾರೆ.

VIEW ALL

Read Next Story