ದೀಪಾವಳಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದ ಧನಂಜಯ್: ಬಾಳಸಂಗಾತಿ ಪರಿಚಯಿಸಿದ ಡಾಲಿ

Yashaswini V
Nov 01,2024

ನಟ ಡಾಲಿ ಧನಂಜಯ್

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಹ್ಯಾಂಡಸಮ್ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದಾರೆ.

ಬಾಳಸಂಗಾತಿ ಪರಿಚಯ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.

ಡಾಲಿ ಭಾವಿ ಪತ್ನಿ

ಭಾವಿ ಪತ್ನಿ ಜೊತೆಗಿನ ಸುಂದರವಾದ ವೀಡಿಯೋ ಹಂಚಿಕೊಳ್ಳುವ ಮೂಲಕ ಡಾಲಿ ಧನಂಜಯ್ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಡಾಲಿ ಸಂಗಾತಿ ಹೆಸರು

ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಡಾ ಧನ್ಯತಾ.

ವೃತ್ತಿ

ವೃತ್ತಿಯಲ್ಲಿ ಗೈನೋಕಾಲಾಜಿಸ್ಟ್ ಆಗಿರುವ ಡಾ ಧನ್ಯತಾ ಡಾಲಿ ಅನ್ನು ಕೈ ಹಿಡುಯುತ್ತಿದ್ದಾರೆ.

ಅಪ್ಪಟ ಕನ್ನಡತಿ

ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸಿಕೆರೆ ಮೂಲದ ನಟ ಧನಂಜಯ್ ಓದಿದ್ದು ಕೂಡ ಮೈಸೂರಿನಲ್ಲಿ.

ಕವನ ಹೇಳುತ್ತಾ ಪರಿಚಯ

ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಸುಂದರವಾಗಿ ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.

ಮದುವೆ ಯಾವಾಗ

ವ್ಯಾಲೆಂಟೈನ್ಸ್ ಡೇ ಬಳಿಕ ಫೆಬ್ರವರಿ 16ರಂದು ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರೂ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಮೈಸೂರಲ್ಲೇ ಏಕೆ ಮದುವೆ!

ಮೈಸೂರು ಡಾಲಿ ಧನಂಜಯ್ ಧನ್ಯತಾ ಅವರೊಂದಿಗೆ ಹೃದಯ ಬೆಸೆದುಕೊಂಡ ಸ್ಥಳವಾದ್ಧರಿಂದ ಅಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

VIEW ALL

Read Next Story