ಸಪ್ತಮಿ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ.
ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ.
ಕಾಂತಾರ ಬಳಿಕ ಹಲವು ಸಿನಿಮಾ ಅವಕಾಶಗಳು ಸಪ್ತಮಿಯನ್ನು ಅರಸಿ ಬಂದಿದ್ದು, ಹಿಂದಿ ಸಿನಿಮಾ ಒಂದರಲ್ಲಿಯೂ ಸಪ್ತಮಿ ನಟಿಸುತ್ತಿದ್ದಾರೆ.
ದಿ ಕಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ನಿರ್ದೇಶನದ ಹೊಸ ಹಿಂದಿ ಸಿನಿಮಾದಲ್ಲಿ ಸಪ್ತಮಿಯವರದ್ದು ಪ್ರಮುಖ ಪಾತ್ರ.
ಇದೀಗ ಈ ನಟಿ ಯುವ ರಾಜನಿಗೆ ಜೋಡಿಯಾಗಿ ಯುವ ಚಿತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.