ಬೇಸಿಗೆ ರಜೆಯ ಪ್ರವಾಸದ ಫೋಟೋಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾರಾ ತೆಂಡೂಲ್ಕರ್ ಮತ್ತು ಅರ್ಜುನ್ ದುಬೈನಲ್ಲಿ ಎರಡು ತಿಂಗಳ ಬೇಸಿಗೆ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಅವರ ಐಷಾರಾಮಿ ಪ್ರಯಾಣದ ಫೋಟೋಗಳು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ.
ಸಾರಾ ಮತ್ತು ಅರ್ಜುನ್ ತೆಂಡೂಲ್ಕರ್ ದುಬೈನ ಬುರ್ಜ್ ಖಲೀಫಾದಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಸಾರಾ ಮತ್ತು ಅರ್ಜುನ್ ಅವರ ದುಬೈ ಪ್ರವಾಸ ಭಾಗವಾಗಿ ಮಾಲ್‌ಗೆ ಭೇಟಿ, ಶಾಪಿಂಗ್, ಅಕ್ವೇರಿಯಂಗೆ ಭೇಟಿ ನೀಡಿದ್ದಾರೆ.
ದುಬೈನಲ್ಲಿಯೂ ಸಾರಾ ವ್ಯಾಯಾಮ ದಿನಚರಿ ಬಿಟ್ಟಿಲ್ಲ.. ಜಿಮ್‌ನಲ್ಲಿ ಕಸರತ್ತು ಮಾಡುವ ಫೋಟೋಗಳನ್ನೂ ಸಹ ಹಂಚಿಕೊಂಡಿದ್ದಾರೆ.
ಸಾರಾ ಮತ್ತು ಅರ್ಜುನ್ ತೆಂಡೂಲ್ಕರ್ ದುಬೈನ ನೈಟ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತ ಫೋಟೋಸ್ ಗಮನಸೆಳೆಯುತ್ತಿವೆ.
ಸಾರಾ ತೆಂಡೂಲ್ಕರ್ ದುಬೈನಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಮ್ಮ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಗೆಳೆಯರ ಜೊತೆಗಿನ ಫೋಟೋಸ್ ಸಹ ಹಂಚಿಕೊಂಡಿದ್ದಾರೆ.
ಪ್ರಸ್ತುತ ಸಾರಾ ತೆಂಡೂಲ್ಕರ್ ಹಾಗೂ ಅರ್ಜುನ್ ಅವರ ದುಬೈ ಡೈರೀಸ್ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿವೆ.