ಶಾರುಖ್ ಖಾನ್ ಓದಿದ್ದೇನು? ಅವರ ಎಜುಕೇಷನ್ ಕ್ವಾಲಿಫಿಕೇಶನ್ ಇಲ್ಲಿದೆ ನೋಡಿ
ಬಾಲಿವುಡ್ ಕಿಂಗ್ ಎಂದಲೇ ಶಾರುಖ್ ಖಾನ್ ಅವರನ್ನು ಕರೆಯಲಾಗುತ್ತದೆ.
ಕೋಟಿ ಕೋಟಿ ಆಸ್ತಿಯ ಒಡೆಯ ಶಾರುಖ್ ಖಾನ್, ಸಿನಿಮಾ ಒಂದಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ.
ಹೀಗಿರುವಾಗ ಶಾರುಖ್ ಓದಿದ್ದೇನು ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
ಸೆಂಟ್ರಲ್ ದೆಹಲಿಯ ಸೇಂಟ್ ಕೊಲಂಬಾಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.
ಅಧ್ಯಯನದಲ್ಲಿ ಮತ್ತು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದರು.
ನಂತರ ಅವರು ಶಾಲೆಯ ಅತ್ಯುನ್ನತ ಪ್ರಶಸ್ತಿಯಾದ ಸ್ವೋರ್ಡ್ ಆಫ್ ಆನರ್ ಪಡೆದರು.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಹಂಸರಾಜ್ ಕಾಲೇಜಿಗೆ ಸೇರಿಕೊಂಡರು.
ದೆಹಲಿಯ ಥಿಯೇಟರ್ ಆಕ್ಷನ್ ಗ್ರೂಪ್‌ನಲ್ಲಿಯೂ ಸಮಯ ಕಳೆದರು.
ನಂತರ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ Mass Communication ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.