ಶ್ರೇಯಾ ಘೋಷಾಲ್ ಭಾರತ ಚಿತ್ರರಂಗದ ಪ್ರಖ್ಯಾತ ಹಿನ್ನಲೆ ಗಾಯಕಿ.

Zee Kannada News Desk
Apr 03,2023


ಭಾರತದ ಹಲವು ಭಾಷೆಗಳಲ್ಲಿ ನೂರಾರು ಮಧುರ ಗೀತೆಗಳಿಗೆ ಧ್ವನಿಯಾಗಿರುವ ಶ್ರೇಯಾ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ್ದಿದ್ದಾರೆ.


1984 ರಲ್ಲಿ ಪಶ್ಚಿಮ ಬಂಗಾಳದ ಬಹರಾಮ್‌ಪುರದಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಆದರೆ ಇವರು ಬೆಳೆದಿದ್ದೆಲ್ಲ ರಾಜಸ್ಥಾನದಲ್ಲಿ.


ಕೇವಲ ನಾಲ್ಕು ವರ್ಷದವರಿದ್ದಾಗಿನಿಂದಲೇ ಶ್ರೇಯಾ ತನ್ನ ತಾಯಿ ಜೊತೆ ಹಾರ್ಮೋನಿಯಂ ಸಾಥ್ ಕೊಡಲು ಹೋಗುತ್ತಿದ್ದರು.


ಬಾಲಕಿಯಾಗಿದ್ದಾಗಲೇ ಜೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಸರಿಗಮಪ' ಮಕ್ಕಳ ಆವೃತ್ತಿಯಲ್ಲಿ ವಿಜೇತರಾದರು.


2000 ದಲ್ಲಿ ಸಂಜಯ ಲೀಲಾ ಬನ್ಸಾಲಿಯವರ ಚಿತ್ರ `ದೇವದಾಸ್' ಮೂಲಕ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಸಂಗೀತ ಪಯಣ ಆರಂಭಿಸಿದರು.


ನಂತರ ಬಾಲಿವುಡ್ ಮಾತ್ರವಲ್ಲದೇ ಕನ್ನಡ,ತಮಿಳು,ತೆಲುಗು,ಮಲಯಾಳಂ,ಬಂಗಾಳಿ,ಮರಾಠಿ, ಭೋಜಪುರಿ ಮುಂತಾದ ಭಾಷೆಗಳಲ್ಲಿ ಹಾಡಿದ್ದಾರೆ.

VIEW ALL

Read Next Story