ಸೋಶಿಯಲ್ ಮಿಡಿಯಾ ಇನ್‌ಫ್ಯುಯೆನ್ಸರ್ ಸೋನು ಶ್ರಿನಿವಾಸ ಗೌಡ ಜುಲೈ 1 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ನ ಮೂಲಕ ಸದಾ ಸುದ್ದಿಯಲ್ಲಿರುವ ಸೋನು ಗೌಡ, ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಒಬ್ಬ ಹುಡುಗಿಯನ್ನು ದತ್ತು ಪಡೆದ ಪ್ರಕರಣದಲ್ಲಿ ಸೋನು ಅರೆಸ್ಟ್ ಆಗಿ, ಹೊರ ಬಂದಿದ್ದರು.
ಸೋನು ತಮ್ಮ ಆಕ್ಟಿಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತು ಸೋನುಗೆ ಶುಭಾಶಯಗಳ ಮಹಾಪುರವೇ ಹರಿದುಬಂದಿದೆ.
ಈ ಹುಟ್ಟುಹಬ್ಬದೊಂದಿಗೆ ಸೋನು ಇದೀಗ 24 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಸೋನು ಸಿಂಪಲ್ ಆಗಿ ಬರ್ತ್‌ಡೇ ಆಚರಿಸಿಕೊಂಡಿದ್ದು, ತಮ್ಮ ಸ್ನೇಹಿತರು ಆಪ್ತರು ಸಹ ಭಾಗಿಯಾಗಿದ್ದರು.
ಸೋನು ಹುಟ್ಟುಹಬ್ಬಕ್ಕೆ ಚಿಟ್ಟೆಯಂತೆ ವಿನ್ಯಾಸಗೊಂಡ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ.