ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಸಿನಿಮಾಗಳಿವು..!

Published by: Zee Kannada News Desk | May 25, 2023

ಪುಟಾಣಿ ಏಜೆಂಟ್ 123 : ಅತ್ಯುತ್ತಮ ಮಕ್ಕಳ ಚಿತ್ರಗಳಲ್ಲಿ 1979 ರಲ್ಲಿ ಗೀತಪ್ರಿಯ ನಿರ್ದೇಶಿಸಿದ ಈ ಚಿತ್ರ ಪುಟಾಣಿ ಏಜೆಂಟ್ 123 ಚಿತ್ರವೂ ಒಂದು. ಇದರಲ್ಲಿ ಮಾಸ್ಟರ್ ರಾಮಕೃಷ್ಣ ಹೆಗಡೆ, ಮಾಸ್ಟರ್ ಭಾನು ಪ್ರಕಾಶ್, ಮತ್ತು ಇಂದಿರಾ ಜೊತೆಗೆ ರೆಬೆಲ್ ಸ್ಟಾರ್ ಅಂಬರೀಶ್, ಮಂಜುಳಾ ಮತ್ತು ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by: Zee Kannada News Desk | May 25, 2023

ಕೊಟ್ರೇಶಿ ಕನಸು : 1994 ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಕೊಟ್ರೇಶಿ ಕನಸು' 42 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಟ ವಿಜಯ್ ರಾಘವೇಂದ್ರ ಅವರು ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ಎಂಬ ಗೌರವವನ್ನು ಪಡೆದರು.

Published by: Zee Kannada News Desk | May 25, 2023

C/o ಫುಟ್‌ಪಾತ್ : ಈ ಚಲನಚಿತ್ರ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿರುವ ವಿಶ್ವದ ಕಿರಿಯ ನಿರ್ದೇಶಕ ಮತ್ತು ನಟ ಕಿಶನ್ ಶ್ರೀಕಾಂತ್ ಅವರ ನಿರ್ದೇಶನದ ಚಲನಚಿತ್ರವಾಗಿದೆ.

Published by: Zee Kannada News Desk | May 25, 2023

ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು : ರಾಮಣ್ಣ ರೈ' ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರಗಳಲ್ಲಿ ಒಂದಾಗಿದೆ. ಕಾಸರಗೋಡು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯನ್ನು ಮುಚ್ಚಲು ನಿರ್ಧರಿಸಿದ ಕೇರಳ ಸರ್ಕಾರದಿಂದ ತಮ್ಮ ಶಾಲೆಯನ್ನು ಉಳಿಸಲು ಒಗ್ಗೂಡುವ ಮಕ್ಕಳ ಧೈರ್ಯವನ್ನು ಈ ಚಲನಚಿತ್ರವು ತೋರಿಸುತ್ತದೆ.

Published by: Zee Kannada News Desk | May 25, 2023

ತಾರೆ ಜಮೀನ್‌ ಪರ್ : ಈ ಚಿತ್ರವು 2002ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ಇದನ್ನು ಆಮಿರ್ ಖಾನ್‌ ನಿರ್ಮಿಸಿ ನಿರ್ದೇಶಿಸಿದರು. ಚಲನಚಿತ್ರವು ಡಿಸ್ಲೆಕ್ಸಿಯಾ ಇರುವ 8 ವರ್ಷ ವಯಸ್ಸಿನ ಮಗು ಇಶಾನ್‍ನ ಜೀವನ ಮತ್ತು ಕಲ್ಪನೆಯನ್ನು ತೋರಿಸುತ್ತದೆ.

Published by: Zee Kannada News Desk | May 25, 2023

VIEW ALL

Read Next Story