ಬುಧವಾರ ಇಟಲಿಯಲ್ಲಿ ಮೆಗಾ ಮತ್ತು ಅಲ್ಲು ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿತು.
ವರುಣ್ ತೇಜ್ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ನನ್ನ ಪ್ರೀತಿ" ಎಂದು ಶೀರ್ಷಿಕೆ ನೀಡಿದ್ದಾರೆ.
ಹಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇದೇ ಜೂನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮಿಸ್ಟರ್ ಸಿನಿಮಾದ ಶೂಟಿಂಗ್ ವೇಳೆ ಮೊದಲ ಸಲ ಭೇಟಿಯಾದಾಗ ಲಾವಣ್ಯ ಮತ್ತು ವರುಣ್ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು.
ಮೆಗಾಸ್ಟಾರ್ ಚಿರಂಜೀವಿ ನವ ಜೋಡಿಯ ಮದುವೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಶುಭ ಹಾರೈಸಿದ್ದಾರೆ.
ವರುಣ್ ತೇಜ್ ತಂದೆ, ಮೆಗಾ ಬ್ರದರ್ ನಾಗಬಾಬು ಕೂಡ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹೊಸ ಜೋಡಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಧು ಲಾವಣ್ಯ ತ್ರಿಪಾಠಿ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದರೆ, ವರುಣ್ ಬೀಜ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು.
ವರುಣ್ ತೇಜ್-ಲಾವಣ್ಯ ತ್ರಿಪಾಠಿ ಜೋಡಿಗೆ ಅಭಿಮಾನಿಗಳು ಹಾರೈಸಿದ್ದಾರೆ. ಜೊಡಿಯ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.