1945ರ ನವೆಂಬರ್ 30 ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ ವಾಣಿ ಜಯರಾಮ್ ಅವರು, ಬಾಲ್ಯದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು.
ಗಾಯಕಿ ವಾಣಿ ಜಯರಾಮ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬೆಂಗಾಲಿ, ಭೋಜ್‌ಪುರಿ, ತುಳು ಮತ್ತು ಒರಿಯಾ ಭಾಷೆಗಳು ಸೇರಿ ಸುಮಾರು ಹತ್ತು ಸಾವಿರ ಹಾಡುಗಳನ್ನು ಹಾಡಿದ್ದಾರೆ
ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ಒಡಿಶಾದಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಧುಮಾಸ ಚಂದ್ರಮʼ (ವಿಜಯ ವಾಣಿ 1976) ಮತ್ತು ʼತೆರೆದಿದೆ ಮನೆ ಓ ಬಾ ಅತಿಥಿʼ (ಹೊಸ ಬೆಳಕು 1982). ನಟ-ಗಾಯಕ ಡಾ. ರಾಜ್‌ಕುಮಾರ್ ಅವರೊಂದಿಗೆ, 1980 ರ ದಶಕದಲ್ಲಿ ವಾಣಿಯವರು ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.
ʼಈ ಶತಮಾನದ ಮಾದರಿ ಹೆಣ್ಣುʼ, ʼಬೆಸುಗೆ ಬೆಸುಗೆʼ, ʼಬೆಳ್ಳಿ ಮೋಡವೆ ಎಲ್ಲಿ ಓಡುವೆʼ, ʼಜೀವನ ಸಂಜೀವನʼ, ʼದೇವ ಮಂದಿರದಲ್ಲಿʼ, ʼಹಾಡು ಹಳೆಯದಾದರೆನುʼ, ʼಕನ್ನಡ ನಾಡಿನ ಕರಾವಳಿʼ, ʼಪ್ರಿಯತಮಾ ಕರುಣೆಯ ತೋರೆಯಾʼ ʼಸದಾ ಕಣ್ಣಲಿ ಪ್ರಾಣಯದ ಗೀತೆ ಹಾಡುವೆ", ʼಎಂದೆಂದು ನಿನ್ನನು ಮರೆತುʼ, ʼಹೊದೆಯ ದೂರ ಓ ಜೊತೆಗಾರʼ ಸೇರಿದಂತೆ ಇನ್ನೂ ಸಾಕಷ್ಟು ಸುಮಧುರ ಗೀತೆಗಳನ್ನು ವಾಣಿ ಜಯರಾಮ್ ಅವರು ಹಾಡಿದ್ದಾರೆ.
ವಿಜಯ ಭಾಸ್ಕರ್ ಅವರ ನಂತರ, ಜಿ.ಕೆ. ವೆಂಕಟೇಶ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಸತ್ಯಂ, ಉಪೇಂದ್ರ ಕುಮಾರ್, ಟಿ.ಜಿ.ಲಿಂಗಪ್ಪ, ಎಲ್. ವೈದ್ಯನಾಥನ್ ಮತ್ತು ಹಂಸಲೇಖ ಅವರಂತಹ ದಿಗ್ಗಜ ಸಂಗೀತ ಸಂಯೋಜಕರ ಹಾಡುಗಳಿಗೆ ವಾಣಿಯವರದ್ದೇ ಧ್ವನಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾಗಳಲ್ಲಿಯೂ ವಾಣಿಯವರು ಹಾಡಿದ್ದಾರೆ.